ADVERTISEMENT

ಚುನಾವಣಾ ಪ್ರಚಾರದಲ್ಲಿ ಸಚಿವ ನಾಗರಾಜ್‌ರಿಂದ 'ನಾಗಿಣಿ‘ ನೃತ್ಯ; ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 10:11 IST
Last Updated 11 ಏಪ್ರಿಲ್ 2019, 10:11 IST
   

ಹೊಸಕೋಟೆ:ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿವೀರಪ್ಪ ಮೊಯಿಲಿಸ್ಪರ್ಧಿಸುತ್ತಿದ್ದು ಚುನಾವಣಾ ಪ್ರಚಾರದಲ್ಲಿ ವಸತಿ ಸಚಿವಎಂ.ಟಿ.ಬಿ ನಾಗರಾಜ್‌ ಹಿಂದಿ ಹಾಡಿಗೆ ಬೆಂಬಲಿಗರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಏಪ್ರಿಲ್ 9ರಂದು ನಡೆದ ಚುನಾಚಣಾ ಪ್ರಚಾರದಲ್ಲಿ ಮತದಾರರನ್ನ ಸೆಳೆಯುವ ಸಲುವಾಗಿ ನಾಗರಾಜ್‌ ಅವರು‘ಮನ್ ಡೋಲೆ ಮೇರಾ ತನ್ ಡೊಲೇ‘ ಹಾಡಿಗೆ ’ನಾಗಿಣಿ ಡ್ಯಾನ್ಸ್‌‘ ಮಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.

ನಾಗರಾಜ್‌ ಅವರು ಈ ಹಿಂದೆ ಹೊಸಕೋಟೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಿದ್ದರು. ಸಚಿವಎಂ.ಟಿ.ಬಿ ನಾಗರಾಜ್‌ ₹1,015 ಕೋಟಿ ಆಸ್ತಿಯನ್ನು ಹೊಂದಿದ್ದು ಭಾರತದ ಅತ್ಯಂತ ಶ್ರೀಮಂತ ಶಾಸಕರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.