ಮಂಡ್ಯ: 'ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೂಳಿಯಂತೆ ನುಗ್ಗಿ ಮುಖ್ಯಮಂತ್ರಿ ಆಗಲಿ' ಎಂದು ಹಾರೈಸಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಗೂಳಿಯೊಂದನ್ನು ಉಡುಗೊರೆ ನೀಡಿದರು.
ಮಂಡ್ಯ ವಿವಿ ಆವರಣದಲ್ಲಿ ನಡೆಯುತ್ತಿರುವ ಪ್ರಜಾಧ್ಚನಿ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಗೂಳಿ ಸ್ವೀಕರಿಸಿದರು.
ಶ್ವೇತವರ್ಣದ ಗೂಳಿಯನ್ನು ಅಲಂಕಾರದೊಂದಿಗೆ ವೇದಿಕೆ ಮುಂದಕ್ಕೆ ಕರೆತರಲಾಯಿತು. ಡಿ.ಕೆ.ಶಿವಕುಮಾರ್ ನಮಸ್ಕಾರ ಮಾಡಿ ಗೂಳಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.