ADVERTISEMENT

ಮಂಗಳೂರಿನಲ್ಲಿ ಬಾಂಬ್‌ ಪತ್ತೆ: ಆಟೊ ರಿಕ್ಷಾ, ಶಂಕಿತ ವ್ಯಕ್ತಿಯ ಚಿತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 12:33 IST
Last Updated 20 ಜನವರಿ 2020, 12:33 IST
ಆಟೊ ರಿಕ್ಷಾ ಮತ್ತು ಶಂಕಿತ ವ್ಯಕ್ತಿ
ಆಟೊ ರಿಕ್ಷಾ ಮತ್ತು ಶಂಕಿತ ವ್ಯಕ್ತಿ   
""

ಮಂಗಳೂರು:ಬಜ್ಪೆ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆಆಟೊ ರಿಕ್ಷಾದಲ್ಲಿ ಬಂದು ಸುಧಾರಿತ ಬಾಂಬ್‌ಗಳಿರುವ ಬ್ಯಾಗ್‌ ಅನ್ನು ಇಟ್ಟಿರುವ ಶಂಕಿತ ವ್ಯಕ್ತಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅಧಿಕೃತವಾಗಿಆಟೊ ರಿಕ್ಷಾ ಮತ್ತು ಶಂಕಿತ ವ್ಯಕ್ತಿಯ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ADVERTISEMENT

ಶಂಕಿತ ವ್ಯಕ್ತಿಯು ಆಟೊದಲ್ಲಿ ಬಂದು ಬ್ಯಾಗ್‌ ಇಟ್ಟು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಂಕಿತ ವ್ಯಕ್ತಿ

ಸ್ಫೋಟಕ ಇರುವ ಬ್ಯಾಗ್ ಸಮೇತ ಬಾಂಬ್ ನಿಷ್ಕ್ರಿಯ ದಳದ ವಾಹನವನ್ನು ಇಲ್ಲಿನ ಕೆಂಜಾರು ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಮರಳಿನ ಚೀಲಗಳನ್ನು ಪೇರಿಸಿದ್ದತಜ್ಞ ಸಿಬ್ಬಂದಿಗಳು ಬಾಂಬ್‌ ಸ್ಫೋಟಿಸಿದ್ದಾರೆ.

ಟೈಮರ್ ಸಂಪರ್ಕ ಸ್ಥಗಿತವಾಗಿರುವ ಕಾರಣಚೀಲವನ್ನೇ ಸ್ಫೋಟಿಸಲು ತಜ್ಞ ಸಿಬ್ಬಂದಿಗಳು ನಿರ್ಧರಿಸಿದ್ದರು.

ಸುಮಾರು 350 ಮೀಟರ್ ದೂರದಲ್ಲಿ ವೈರ್ ಬಳಸಿ ಜೀವಂತ ಬಾಂಬ್‌ ಅನ್ನು ಸ್ಫೋಟಿಸಿದರು ಎಂದು ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.