ADVERTISEMENT

ಚುನಾವಣಾ ಪ್ರಚಾರಕ್ಕೆ ಮಾಸ್ಕ್‌: ಗಮನ ಸೆಳೆದ ಕಾಂಗ್ರೆಸ್‌ ತಂತ್ರ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 3:23 IST
Last Updated 9 ಅಕ್ಟೋಬರ್ 2020, 3:23 IST
ತುಮಕೂರಿನಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕಂಡು ಬಂದ ಮಾಸ್ಕ್‌ 
ತುಮಕೂರಿನಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕಂಡು ಬಂದ ಮಾಸ್ಕ್‌    

ಶಿರಾ: ರಾಜ್ಯದ ಗಮನ ಸೆಳೆದಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರಕ್ಕಾಗಿಕಾಂಗ್ರೆಸ್‌ ಕಂಡುಕೊಂಡ ಹೊಸ ತಂತ್ರ ಗಮನ ಸೆಳೆಯುತ್ತಿದೆ.

ಕೊರೊನಾ ಸೋಂಕು ಹರಡದಂತೆ ತಡೆಯಲು ಜನರು ಬಳಸುವ ಮಾಸ್ಕ್‌ಗಳನ್ನೇ ಪ್ರಚಾರ ಸಾಮಗ್ರಿಯಾಗಿ ಬಳಸಿಕೊಳ್ಳುವ ಸರಳ ಮತ್ತು ಸುಲಭ ಉಪಾಯವನ್ನು ಕಾಂಗ್ರೆಸ್‌ ಕಂಡುಕೊಂಡಿದೆ.

ತುಮಕೂರಿನಲ್ಲಿ ಬುಧವಾರ ನಡೆದ ಕಾಂಗ್ರೆಸ್ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಪ್ರಚಾರದ ಮಾಸ್ಕ್‌ ಕಂಡು ಬಂದಿವೆ. ಕಾಂಗ್ರೆಸ್‌ ಕಾರ್ಯಕರ್ತರು ಧರಿಸಿದ್ದ ಮಾಸ್ಕ್‌ನಲ್ಲಿ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ಭಾವಚಿತ್ರ ಮತ್ತು ಪಕ್ಷದ ಚಿಹ್ನೆಯ ಚಿತ್ರವಿತ್ತು.

ADVERTISEMENT

ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೂ ಮುನ್ನವೇ ಮೂರು ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಆರಂಭಿಸಿವೆ. ರಾಜಕೀಯ ಸಭೆ, ಸಮಾರಂಭಗಳ ಭರಾಟೆ ಕೂಡ ಜೋರಾಗಿದೆ. ಇಂತಹ ಮಾಸ್ಕ್‌ಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲುಉಳಿದ ಪಕ್ಷಗಳೂ ಆಸಕ್ತಿ ತೋರಿವೆ. ಮಾಸ್ಕ್‌ ಜತೆಗೆ ಸ್ಯಾನಿಟೈಸರ್, ಹ್ಯಾಂಡ್‌ ಗ್ಲೋವ್ಸ್‌ಗಳನ್ನು ಪ್ರಚಾರ ಸರಕಾಗಿ ಬಳಸಿಕೊಳ್ಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.