ADVERTISEMENT

ವೈದ್ಯಕೀಯ ಛಾಯ್ಸ್‌ ನಮೂದು: ಆ.19ರಂದು ಮಧ್ಯಾಹ್ನ 3ರವರೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 15:54 IST
Last Updated 18 ಆಗಸ್ಟ್ 2025, 15:54 IST
<div class="paragraphs"><p>–ಪ್ರಾತಿನಿಧಿಕ ಚಿತ್ರ</p></div>

–ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವವರಿಗೆ ಛಾಯ್ಸ್‌ ದಾಖಲಿಸಲು ಮತ್ತು ಶುಲ್ಕ ಪಾವತಿಸಲು ಆ.19ರಂದು ಮಧ್ಯಾಹ್ನ 3ರವರೆಗೆ ಅವಕಾಶ ನೀಡಲಾಗಿದೆ.

ಶುಲ್ಕ ಪಾವತಿ‌ ನಂತರ ಸೀಟು ಖಾತರಿ ಚೀಟಿ ಡೌನ್‌ಲೋಡ್‌ಕೊಂಡು ಅಂದು ಸಂಜೆ 5.30ರ ಒಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು. ಇದುವರೆಗೂ ಯಾವುದೇ ಛಾಯ್ಸ್‌ ನಮೂದಿಸದವರು ಹಾಗೂ ಶುಲ್ಕ ಪಾವತಿಸ‌ದವರು ಅವಕಾಶ ಬಳಸಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.

ADVERTISEMENT

ಛಾಯ್ಸ್‌ ನಮೂದಿಸದ ಹಾಗೂ ಶುಲ್ಕ ಪಾವತಿ ಮಾಡದಿರುವವರ ಸೀಟುಗಳನ್ನು ರದ್ದುಪಡಿಸಿ, ಆ ಸೀಟುಗಳನ್ನು 2ನೇ ಸುತ್ತಿನ ಸೀಟು ಹಂಚಿಕೆಗೆ ಸೇರಿಸಿಕೊಳ್ಳಲಾಗುವುದು ಎಂದು ‌‌‌ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.