ADVERTISEMENT

48 ಗಂಟೆಗಳ ಮೇಲಷ್ಟೇ ನೋಟಿಸ್ ಮುಟ್ಟುತ್ತೇವೆ: ಡಿ.ಕೆ. ಸುರೇಶ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 6:28 IST
Last Updated 13 ಜನವರಿ 2022, 6:28 IST
ಡಿ.ಕೆ. ಸುರೇಶ್
ಡಿ.ಕೆ. ಸುರೇಶ್   

ಕನಕಪುರ: ಮೇಕೆದಾಟು ಪಾದಯಾತ್ರೆ ಮುಂದುವರಿಸದಂತೆ ಸೂಚಿಸಿ ರಾಮನಗರ ಪೊಲೀಸರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆಗೆ ನೋಟಿಸ್ ಅಂಟಿಸಿದ್ದಾರೆ.

ಈ ಕುರಿತು ಕನಕಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಸದ ಡಿ.ಕೆ. ಸುರೇಶ್, 'ಪಾದಯಾತ್ರೆ ಮಾಡಬಾರದೆಂದು ನೋಟಿಸ್ ಕಳುಹಿಸಿ ಕೊಟ್ಟಿದ್ರು. ಒಬ್ಬ ಕೋವಿಡ್ ಪಾಸಿಟಿವ್ ರೋಗಿ ನೋಟಿಸ್‌ಗೆ ಸಹಿ ಮಾಡಿ ನಮ್ಮತ್ರ ಕಳುಹಿಸಿದ್ದಾರೆ. ಅದನ್ನು ಕನಿಷ್ಠ 48 ತಾಸು ಆದ ಮೇಲೆ ಸ್ವೀಕಾರ ಮಾಡುತ್ತೇವೆ' ಎಂದು ಹೇಳಿದ್ದಾರೆ.

'ಕೋವಿಡ್ ಅನ್ನು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಕಳುಹಿಸುವ ಪ್ರಯತ್ನ ಮಾಡಲಾಗಿದೆ. ಅದಕ್ಕಾಗಿ ಆ ನೋಟಿಸ್ ಅನ್ನು ಮುಟ್ಟಿಲ್ಲ. ನೋಟಿಸ್‌ನಲ್ಲಿ ಏನಿದೆ ಅನ್ನೋದು ಗೊತ್ತಿಲ್ಲ' ಎಂದು ಹೇಳಿದರು.

ADVERTISEMENT

'ಪಾದಯಾತ್ರೆ ಮುಂದುವರಿಸುವುದಕ್ಕೆ ತೊಂದರೆಯಿಲ್ಲ. ರಾಜ್ಯದಬೇರೆ ಬೇರೆ ಕಡೆಗಳಿಂದ ಜನರು ಬರಬಾರದೆಂಬ ಉದ್ದೇಶದಲ್ಲಿ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ' ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.