ADVERTISEMENT

ಸರ್ವೋಚ್ಚ ನಾಯಕರಾಗಿದ್ದವರೂ ಸೋತಿಲ್ಲವೇ?: ಸಚಿವ ಎನ್‌. ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 15:51 IST
Last Updated 28 ಅಕ್ಟೋಬರ್ 2024, 15:51 IST
ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ
ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ   

ಬೆಂಗಳೂರು: ‘ಯಾರು ಸರ್ವೋಚ್ಚ ನಾಯಕರಾಗಿದ್ದರೊ ಅವರೇ ಸೋತಿಲ್ಲವೇ? ಸೋಲು– ಗೆಲುವನ್ನು ಜನತೆ ಆ ಕ್ಷಣ ತೀರ್ಮಾನ ಮಾಡುತ್ತಾರೆ’ ಎಂದು ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಪರ ಎಚ್‌.ಡಿ. ದೇವೇಗೌಡರು ಪ್ರಚಾರ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅವರು (ದೇವೇಗೌಡರು) ಒಂದು ವಾರವೇ ಪ್ರಚಾರ ಮಾಡಲಿ. ನಾವು ಪ್ರಚಾರ ಮಾಡಬೇಡಿ ಎಂದು ಹೇಳಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

ಚನ್ನಪಟ್ಟಣದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯುವ ಕುರಿತು ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ, ಸಾಧನೆಗಳ ಮೇಲೆ ನಾವು ಮತ ಕೇಳುತ್ತೇವೆ. ‘ಗ್ಯಾರಂಟಿ’ ಯೋಜನೆಗಳು ಒಕ್ಕಲಿಗ ಸಮುದಾಯಕ್ಕೂ ತಲುಪುತ್ತಿವೆ’ ಎಂದರು.

ADVERTISEMENT

‘ನಾನು ಸೇರಿದಂತೆ ಹಳೇ ಮೈಸೂರು ಭಾಗದ ಸಚಿವರು, ಶಾಸಕರು ಚನ್ನಪಟ್ಟಣದಲ್ಲಿ ಪ್ರಚಾರ ಮತ್ತು ಚುನಾವಣಾ ತಂತ್ರಗಾರಿಕೆ ಮಾಡುತ್ತೇವೆ. ಮುಂಬೈ ಕರ್ನಾಟಕ ಭಾಗದ ಸಚಿವರು ಶಿಗ್ಗಾವಿಯಲ್ಲಿ, ಹೈದ್ರಾಬಾದ್ ಕರ್ನಾಟಕದವರು ಸಂಡೂರಿನಲ್ಲಿ ಪ್ರಚಾರ ಮಾಡಲಿದ್ದಾರೆ. ಎಲ್ಲ ಮೂರೂ ಕ್ಷೇತ್ರಗಳನ್ನು ನಾವು ಗೆದ್ದೆ ಗೆಲ್ಲುತ್ತೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.