ADVERTISEMENT

Mothers Day 2023 | ಅಮ್ಮ ಆಶೀರ್ವಾದ ಮಾಡುವ ಚಿತ್ರ ಹಂಚಿಕೊಂಡ ಡಿ.ಕೆ ಶಿವಕುಮಾರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮೇ 2023, 9:27 IST
Last Updated 14 ಮೇ 2023, 9:27 IST
   

ಬೆಂಗಳೂರು: ತಾಯಂದಿನ ದಿನದ ಅಂಗವಾಗಿ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ತಮ್ಮ ತಾಯಿ ಜತೆಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

‘ಅಮ್ಮ ಎನ್ನುವುದು ಪರಿಪೂರ್ಣ ಅನುಭೂತಿ. ದೇವರಿಗಿಂತ ಮಿಗಿಲಾದ ಶಕ್ತಿ ಅಮ್ಮ‘ ಎಂದು ಬರೆದುಕೊಂಡಿದ್ದಾರೆ.

‘ಅಮ್ಮ ಎನ್ನುವ ಪದವನ್ನು ವರ್ಣಿಸಲು ಸಾಧ್ಯವಿಲ್ಲ. ಕಾರಣ ಅದು ಕೇವಲ ಪದವಲ್ಲ, ಅದೊಂದು ಪರಿಪೂರ್ಣ ಅನುಭೂತಿ. ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿಯಾಗಿರುವ ಅಮ್ಮ , ಮಕ್ಕಳಿಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದು, ಎಲ್ಲಾ ಪ್ರೀತಿಯ ಮಾತೃ ಹೃದಯಗಳಿಗೆ ವಿಶ್ವ ತಾಯಂದಿರ ದಿನದ ಮನಃಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ‘ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಮೇ ತಿಂಗಳ ಎರಡನೇ ಭಾನುವಾರವನ್ನು ಅಮ್ಮಂದಿನ ದಿನ ಎಂದು ಆಚರಿಸಲಾಗುತ್ತದೆ. ವಿಶ್ವದ 40ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಅಮ್ಮಂದಿನ ದಿನ ಎಂದು ಆಚರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.