ADVERTISEMENT

ಮೈಸೂರು ಅತ್ಯಾಚಾರ ಪ್ರಕರಣ: ಬಂಧಿತರ ಪೈಕಿ ಇಬ್ಬರಿಗೆ ಹೆಣ್ಣು, ಹಣದ ಚಪಲ!

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 2:38 IST
Last Updated 30 ಆಗಸ್ಟ್ 2021, 2:38 IST
ಅತ್ಯಾಚಾರ ನಡೆದ ಪ್ರದೇಶದಲ್ಲಿ ಪೊಲೀಸರ ಪರಿಶೀಲನೆ
ಅತ್ಯಾಚಾರ ನಡೆದ ಪ್ರದೇಶದಲ್ಲಿ ಪೊಲೀಸರ ಪರಿಶೀಲನೆ    

ಮೈಸೂರು: ಬಂಧಿತರ ಪೈಕಿ ಇಬ್ಬರು ಆರೋಪಿಗಳು ಮಹಿಳೆಯರನ್ನು ವಿಕೃತವಾಗಿ ಹಿಂಸಿಸುವುದನ್ನೇ ರೂಢಿ ಮಾಡಿಕೊಂಡಿದ್ದರು ಎಂಬ ಮಾಹಿತಿ ತನಿಖೆಯಿಂದ ಬಹಿರಂಗವಾಗಿದೆ.

ಉಳಿದವರು ಹಣ, ಒಡವೆ ದರೋಡೆ ಮಾಡುತ್ತಿದ್ದ ಅಂಶ ಗೊತ್ತಾಗಿದೆ. ಅತ್ಯಾಚಾರದ ವಿಡಿಯೊ ಮಾಡಿಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಗಳು, ಅವರನ್ನು ಬೆದರಿಸುತ್ತಿದ್ದರು. ಹಲವು ಮಂದಿ ಗೂಗಲ್‌ಪೇ ಮೂಲಕ ಇವರಿಗೆ ಹಣ ಪಾವತಿಸುತ್ತಿದ್ದರು. ಆರೋಪಿಗಳ ವಿರುದ್ಧ ಗಂಧದ ಮರ ಕಳವು ಹಾಗೂ ಕೊಲೆ ಪ್ರಕರಣಗಳು ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಹಗಲಿನಲ್ಲಿ ನಿದ್ರಿಸುತ್ತಿದ್ದ ಆರೋಪಿಗಳು ರಾತ್ರಿ ವೇಳೆ ಕಳ್ಳತನ, ದರೋಡೆಗೆ ಇಳಿಯುತ್ತಿದ್ದರು. ತಾಳವಾಡಿ ಸೇರಿದಂತೆ ತಮಿಳುನಾಡಿನ ಇತರೆ ಭಾಗಗಳಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದರು’ ಎಂದು ತಾಳವಾಡಿ ನಿವಾಸಿಯೊಬ್ಬರು ಹೇಳುತ್ತಾರೆ.

ಕೂದಲು, ಚರ್ಮದ ಪರೀಕ್ಸೆ:ಆರೋಪಿಗಳ ಕೂದಲು, ಚರ್ಮ ಮೊದಲಾದ ಮಾದರಿ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅತ್ಯಾಚಾರ ನಡೆಸಿದತಂಡದಲ್ಲಿ 7 ಮಂದಿ ಇರುವುದಾಗಿತನಿಖೆ ವೇಳೆ ಒಬ್ಬಾತ ಹೇಳಿದ್ದು, ಆತನ ಪತ್ತೆಗೆ ಪೊಲೀಸರ ತಂಡ ತಮಿಳುನಾಡಿಗೆ ತೆರಳಿದೆ.

ಆರೋಪಿಗಳಲ್ಲಿ ಬಾಲ ಆರೋಪಿಗಳೂ ಇದ್ದು, ಅವರ ವಯಸ್ಸಿನ ದೃಢೀಕರಣ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ತಾಯಿಯ ಕಣ್ಣೀರು:‘ಪೊಲೀಸರು ಮಧ್ಯರಾತ್ರಿ ಏಕಾಏಕಿ ಮನೆಗೆ ನುಗ್ಗಿ ಮಗನನ್ನು ಎಳೆದು ಕೊಂಡು ಹೋದರು. ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಆತನ ಬಂಧನದಿಂದ ದಿಕ್ಕು ತೋಚದಂತಾಗಿದೆ’ ಎಂದು ತಮಿಳುನಾಡಿನ ತಾಳವಾಡಿಯಲ್ಲಿ ಆರೋಪಿಯೊಬ್ಬನ ತಾಯಿ ಕಣ್ಣೀರು ಹಾಕಿದ್ದಾರೆ.ಮತ್ತೊಬ್ಬ ಆರೋಪಿಯ ಕುಟುಂಬದ ವರು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.