ಬೆಂಗಳೂರು: ‘ನಮ್ಮ ಮೆಟ್ರೊ ಆರಂಭವಾಗಿದ್ದು ಯಾವಾಗ ಎಂಬ ಇತಿಹಾಸವೇ ಬಿಜೆಪಿಯವರಿಗೆ ಗೊತ್ತಿಲ್ಲ. ನಮ್ಮ ಮೆಟ್ರೊ ಜನರ ಸಂಸ್ಥೆಯೇ ಹೊರತು, ಯಾವುದೇ ಪಕ್ಷದ ಸ್ವತ್ತಲ್ಲ. ಆದರೆ, ಬಿಜೆಪಿಯವರಿಗೆ ಕೆಲಸಕ್ಕಿಂತ ಪ್ರಚಾರದ ಹುಚ್ಚು ಜಾಸ್ತಿ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನಮ್ಮ ಮೆಟ್ರೊ ಯೋಜನೆಯಲ್ಲಿ ರಾಜ್ಯ ಸರ್ಕಾರದ ದೊಡ್ಡ ಪಾಲಿದೆ. ಈ ಯೋಜನೆಯ ಹಂತ 1ರಲ್ಲಿ ಕರ್ನಾಟಕ ಸರ್ಕಾರ ಶೇ 30 (ಜಮೀನೂ ಸೇರಿ), ಕೇಂದ್ರ ಶೇ 25, ಉಳಿದ ಶೇ 45ರಷ್ಟನ್ನು ಸಾಲದ ರೂಪದಲ್ಲಿ ಮೆಟ್ರೊ ಸಂಸ್ಥೆ ಪಡೆದಿದೆ. ಹಂತ 2ರಲ್ಲಿ ಕರ್ನಾಟಕ ಶೇ 30 ಮತ್ತು ಜಮೀನು ಜೊತೆಗೆ, ಇತರ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಿದೆ. ಇಲ್ಲಿ ಕೇಂದ್ರದ ಪಾಲು ಕೇವಲ ಶೇ 20. ಉಳಿದ ಶೇ 50ರಷ್ಟು ಮೊತ್ತವನ್ನು ಮೆಟ್ರೊ ಸಂಸ್ಥೆ ಸಾಲ ಪಡೆದಿದೆ’ ಎಂದರು.
‘ರಾಜ್ಯ ಸರ್ಕಾರದಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಆರೋಪಿಸುವ ಬಿಜೆಪಿ ನಾಯಕರು, ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ ಎಂದು ಎಂದಾದರೂ ವಿಚಾರಿಸಿದ್ದಾರೆಯೇ? ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕರು ಇಡೀ ಮೆಟ್ರೊ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಮಾಡಿರುವಂತೆ ಪ್ರಚಾರ ಪಡೆಯುತ್ತಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ’ ಎಂದರು.
‘ಯೋಜನೆ ವಿಳಂಬದಿಂದಾಗಿ ಒಂದು ಕಿ.ಮೀಗೆ ₹400 ಕೋಟಿ ನಷ್ಟವಾಗಿದೆ’ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಸಚಿವರು, ‘ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇದೆಯಲ್ಲವೇ? ಬೋಗಿಗಳು ಬರಲು ತಡ ಆಗಿರುವುದು ಯಾರಿಂದ? ಪರಿಸರ ಇಲಾಖೆಯ ಅನುಮತಿ ನೀಡುವವರು ಯಾರು? ಎಲ್ಲ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡಬೇಕಲ್ಲವೇ’ ಎಂದರು.
‘ರೈಲ್ವೆ ಇಲಾಖೆ ಎಲ್ಲ ಯೋಜನೆಗಳಲ್ಲಿ ರಾಜ್ಯ ಸರ್ಕಾರ ಜಮೀನು ನೀಡುವ ಜೊತೆಗೆ, ವೆಚ್ಚದ ಶೇ 50 ಪಾಲು ನೀಡುತ್ತಿದೆ. ಆದರೆ, ಬಾವುಟ ಹಾರಿಸಲು ದೆಹಲಿಯಿಂದ ಬರುತ್ತಾರೆ. ರಾಜ್ಯ ಸರ್ಕಾರಕ್ಕೆ ಆಹ್ವಾನವನ್ನೇ ನೀಡುವುದಿಲ್ಲ’ ಎಂದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಕಾಂಗ್ರೆಸ್ ಮುಖಂಡರಾದ ಕೃಷ್ಣಂ ರಾಜು ಇದ್ದರು.
‘ರಾಜ್ಯದ ಪಾಲೇ ಹೆಚ್ಚು’
‘ನಮ್ಮ ಮೆಟ್ರೊದ ಹಂತ 3ರಲ್ಲಿ ಕರ್ನಾಟಕ ಶೇ 20 ಅನುದಾನ ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ ಕೇಂದ್ರ ಸರ್ಕಾರ ಶೇ 20 ಉಳಿದ ಶೇ 60 ಅನುದಾನವನ್ನು ಮೆಟ್ರೊ ಸಂಸ್ಥೆ ಸಾಲವಾಗಿ ಪಡೆದಿದೆ. ಈ ಸಾಲಕ್ಕೆ ರಾಜ್ಯ ಸರ್ಕಾರ ಖಾತರಿ ನೀಡಿದೆ’ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು. ‘ಮೆಟ್ರೊ ಒಟ್ಟಾರೆ ಕಾಮಗಾರಿಗೆ ಈವರೆಗೆ ರಾಜ್ಯ ಸರ್ಕಾರ ₹ 24064.30 ಕೋಟಿ ನೀಡಿದರೆ ಕೇಂದ್ರ ಸರ್ಕಾರ ₹ 17803.85 ಕೋಟಿ ನೀಡಿದೆ. ಮೆಟ್ರೊ ಸಂಸ್ಥೆ ₹ 435498.53 ಕೋಟಿ ಸಾಲ ಮಾಡಿದೆ’ ಎಂದರು.‘ರಾಜ್ಯದ ಪಾಲೇ ಹೆಚ್ಚು’
‘ನಮ್ಮ ಮೆಟ್ರೊದ ಹಂತ 3ರಲ್ಲಿ ಕರ್ನಾಟಕ ಶೇ 20 ಅನುದಾನ, ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ, ಕೇಂದ್ರ ಸರ್ಕಾರ ಶೇ 20, ಉಳಿದ ಶೇ 60 ಅನುದಾನವನ್ನು ಮೆಟ್ರೊ ಸಂಸ್ಥೆ ಸಾಲವಾಗಿ ಪಡೆದಿದೆ. ಈ ಸಾಲಕ್ಕೆ ರಾಜ್ಯ ಸರ್ಕಾರ ಖಾತರಿ ನೀಡಿದೆ’ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.
‘ಮೆಟ್ರೊ ಒಟ್ಟಾರೆ ಕಾಮಗಾರಿಗೆ ಈವರೆಗೆ ರಾಜ್ಯ ಸರ್ಕಾರ ₹ 24,064.30 ಕೋಟಿ ನೀಡಿದರೆ, ಕೇಂದ್ರ ಸರ್ಕಾರ ₹ 17,803.85 ಕೋಟಿ ನೀಡಿದೆ. ಮೆಟ್ರೊ ಸಂಸ್ಥೆ ₹ 43,5498.53 ಕೋಟಿ ಸಾಲ ಮಾಡಿದೆ’ ಎಂದರು.
‘ರಾಜ್ಯದ ಪಾಲೇ ಹೆಚ್ಚು’
‘ನಮ್ಮ ಮೆಟ್ರೊದ ಹಂತ 3ರಲ್ಲಿ ಕರ್ನಾಟಕ ಶೇ 20 ಅನುದಾನ, ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ, ಕೇಂದ್ರ ಸರ್ಕಾರ ಶೇ 20, ಉಳಿದ ಶೇ 60 ಅನುದಾನವನ್ನು ಮೆಟ್ರೊ ಸಂಸ್ಥೆ ಸಾಲವಾಗಿ ಪಡೆದಿದೆ. ಈ ಸಾಲಕ್ಕೆ ರಾಜ್ಯ ಸರ್ಕಾರ ಖಾತರಿ ನೀಡಿದೆ’ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.
‘ಮೆಟ್ರೊ ಒಟ್ಟಾರೆ ಕಾಮಗಾರಿಗೆ ಈವರೆಗೆ ರಾಜ್ಯ ಸರ್ಕಾರ ₹ 24,064.30 ಕೋಟಿ ನೀಡಿದರೆ, ಕೇಂದ್ರ ಸರ್ಕಾರ ₹ 17,803.85 ಕೋಟಿ ನೀಡಿದೆ. ಮೆಟ್ರೊ ಸಂಸ್ಥೆ ₹ 43,5498.53 ಕೋಟಿ ಸಾಲ ಮಾಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.