ADVERTISEMENT

ಅರಮನೆ ಮೈದಾನದಲ್ಲಿ ಒಡಿಶಾ ವಲಸಿಗರು: ರೈಲಿಗೆ ತೆರಳಲು ನೂಕು ನುಗ್ಗಲು

​ಪ್ರಜಾವಾಣಿ ವಾರ್ತೆ
Published 23 ಮೇ 2020, 7:11 IST
Last Updated 23 ಮೇ 2020, 7:11 IST
ಒಡಿಶಾಗೆ ತೆರಳಲು ಅರಮನೆ ಮೈದಾನಕ್ಕೆ ಆಗಮಿಸಿರುವ ವಲಸಿಗರು
ಒಡಿಶಾಗೆ ತೆರಳಲು ಅರಮನೆ ಮೈದಾನಕ್ಕೆ ಆಗಮಿಸಿರುವ ವಲಸಿಗರು   

ಬೆಂಗಳೂರು: ತಮ್ಮ ರಾಜ್ಯಕ್ಕೆ ತೆರಳಲು ಒಡಿಶಾ ರಾಜ್ಯಕ್ಕೆ ಸೇರಿದ ವಲಸಿಗರು ಸಾವಿರಾರು ಸಂಖ್ಯೆಯಲ್ಲಿ ಅರಮನೆ ಮೈದಾನಕ್ಕೆ ಆಗಮಿಸಿದ್ದು ಬಸ್ಸುಗಳನ್ನು ಹತ್ತಲು ನೂಕು ನುಗ್ಗಲು ಉಂಟಾಗಿತ್ತು.

ಎಲ್ಲಾ ವಲಸಿಗರಿಗೂಒಡಿಶಾಗೆ ತೆರಳಲು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂಬ ಸಂದೇಶ ಶುಕ್ರವಾರ ಬಂದಿದ್ದರಿಂದವಲಸಿಗರು ಗುಂಪು ಗುಂಪಾಗಿ ಅರಮನೆ ಮೈದಾನದ ತ್ರಿಪುರವಾಸಿನಿ ದ್ವಾರದ ಬಳಿಗೆ ಆಗಮಿಸಿದ್ದರು.

ರೈಲನ್ನುಪುರಿವರೆಗೆ ಮಾತ್ರ ವ್ಯವಸ್ಥೆ ಮಾಡಲಾಗಿದೆ, ಮುಂದಿನ ಸ್ಥಳಗಳಿಗೆ ಯಾವುದೇ ವ್ಯವಸ್ಥೆ ಇಲ್ಲ ಎಂದು ವ್ಯವಸ್ಥಾಪಕರು ಮೈಕಿನಲ್ಲಿ ಹೇಳುತ್ತಿದ್ದಂತೆ ಜನರು ಗೊಂದಲಕ್ಕೆ ಒಳಗಾಗಿದ್ದರು.ಪುರಿ ಸುತ್ತಮುತ್ತಲಿನ ವಲಸಿಗರೂಸೇರಿದಂತೆಒಡಿಶಾ ರಾಜ್ಯಕ್ಕೆ ಸೇರಿದವರು ಅರಮನೆ ಮೈದಾನಕ್ಕೆ ಬಂದಿದ್ದರಿಂದ ನೂಕು ನುಗ್ಗಲಿಗೆ ಕಾರಣವಾಗಿದೆ ಎನ್ನಲಾಗಿದೆ.

ADVERTISEMENT

ಇವರಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ವಿವಿಧ ಕೆಲಸಗಳಲ್ಲಿ ತೊಡಗಿದ್ದವರೂ ಸೇರಿದ್ದಾರೆ. ಶನಿವಾರ ಬೆಂಗಳೂರಿನಿಂದ ರೈಲು ಹೊರಡಲಿದ್ದು, ಎಲ್ಲರೂ ರೈಲು ನಿಲ್ದಾಣಕ್ಕೆ ತಲುಪಲಿದ್ದಾರೆ.ಎಲ್ಲರನ್ನೂ ಸರ್ಕಾರಿ ಬಸ್ಸುಗಳಲ್ಲಿ ರೈಲು ನಿಲ್ದಾಣಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಇವರಿಗೆ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆಯಿಂದಲೇ ಅರಮನೆ ಮೈದಾನಕ್ಕೆ ಬರಲಾರಂಭಿಸಿದ್ದು,ಎಲ್ಲಾ ವಲಸಿಗರು ತಮ್ಮ ಲಗ್ಗೇಜುಗಳನ್ನು ಹೊತ್ತು, ಮಹಿಳೆಯರು ಹಾಗೂ ಮಕ್ಕಳೊಡನೆ ಆಗಮಿಸುತ್ತಿರುವುದು ಕಂಡು ಬಂತು.

ಬಸ್ಸಿಗೆ ಹೋಗುವ ಆತುರದಲ್ಲಿ ಎಲ್ಲಾ ವಲಸಿಗರು ಅಂತರ ಕಾಯ್ದುಕೊಂಡಿರಲಿಲ್ಲ. ಕೆಲವರು ಮಾಸ್ಕ್‌ಧರಿಸಿರಲಿಲ್ಲ.ಪೊಲೀಸರನ್ನು ಕಂಡರೆ ಮಾತ್ರ ಮಾಸ್ಕ್ ಧರಿಸುವುದು ಕಂಡು ಬಂತು.ಸ್ಥಳದಲ್ಲಿ ನಗರ ಸಂಚಾರ ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಹಾಜರಿದ್ದು ಬಿಗಿ ಭದ್ರತೆ ಕೈಗೊಂಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.