ADVERTISEMENT

ರೈಲಿನ ಮಾದರಿಯ ನಂಜನಗೂಡಿನ ಸರ್ಕಾರಿ ಶಾಲೆಗೆ ಕೇಂದ್ರ ಸಚಿವರ ಶ್ಲಾಘನೆ

ಹಾರೋಪುರದ ಶಾಲೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 5:48 IST
Last Updated 17 ಜುಲೈ 2018, 5:48 IST
ನಿಲ್ದಾಣದಲ್ಲಿ ನಿಂತಿರುವ ರೈಲಿನಂತೆ ಕಾಣುತ್ತಿರುವ ಹಾರೋಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ –ಪ್ರಜಾವಾಣಿ ಚಿತ್ರ
ನಿಲ್ದಾಣದಲ್ಲಿ ನಿಂತಿರುವ ರೈಲಿನಂತೆ ಕಾಣುತ್ತಿರುವ ಹಾರೋಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ –ಪ್ರಜಾವಾಣಿ ಚಿತ್ರ   

ನವದೆಹಲಿ: ನಿಲ್ದಾಣದಲ್ಲಿ ನಿಂತಿರುವ ರೈಲಿನ ಮಾದರಿಯಲ್ಲಿ ಶಾಲೆಯ ಕಟ್ಟಡಕ್ಕೆ ಬಣ್ಣ ಬಳಿದು ಮಕ್ಕಳನ್ನು ಆಕರ್ಷಿಸಲು ನಂಜನಗೂಡು ಹಾರೋಪುರದ ಸರ್ಕಾರಿ ಶಾಲೆಯ ಶಿಕ್ಷಕರು ಕೈಗೊಂಡ ಕ್ರಮವನ್ನು ಕೇಂದ್ರ ಸಚಿವ ಪೀಯೂಷ್ ಗೋಯಲ್ ಶ್ಲಾಘಿಸಿದ್ದಾರೆ.

‘ಸರ್ಕಾರಿ ಶಾಲೆ ರೈಲಿನ ಕೋಚ್‌ ರೀತಿ ಕಾಣುವಂತೆ ಬಣ್ಣ ಬಳಿದಿರುವ ನವೀನ ಕಲ್ಪನೆ ಶ್ಲಾಘನೀಯ. ತರಗತಿಗೆ ಹಾಜರಾಗದ ಮತ್ತು ಶಾಲೆ ತೊರೆಯುವ ವಿದ್ಯಾರ್ಥಿಗಳನ್ನು ಆಕರ್ಷಿಸಿ ಪೂರ್ಣ ಹಾಜರಾತಿ ಇರುವಂತೆ ನೋಡಿಕೊಳ್ಳಲು ಇದರಿಂದ ನೆರವಾಗಿದೆ’ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಮೈಸೂರಿನ ವರುಣಾ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ ಪುಟ್ಟ ಗ್ರಾಮ ಹಾರೋಪುರ. 540 ಜನಸಂಖ್ಯೆ ಹೊಂದಿದೆ. ಇಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯ ವರೆಗೆ ಒಟ್ಟು 55 ಮಕ್ಕಳು ಓದುತ್ತಿದ್ದಾರೆ.

ಖಾಸಗಿ ಶಾಲೆಗಳ ಸ್ಪರ್ಧೆ ಎದುರಿಸುವ ನಿಟ್ಟಿನಲ್ಲಿ ಏನಾದರೂ ಮಾಡಬೇಕು ಎಂದು ಮುಂದಾದ ಶಾಲೆಯ ಹಿರಿಯ ಶಿಕ್ಷಕ ದೊರೆಸ್ವಾಮಿ ಅವರು, ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದಾಗ ಉತ್ತರ ಭಾರತದ ಶಾಲೆಯೊಂದರಲ್ಲಿ ಇಂತಹ ಪ್ರಯೋಗ ನಡೆದಿರುವುದು ತಿಳಿದಿದೆ. ಆ ಪ್ರಯೋಗವನ್ನು ಇಲ್ಲಿ ಕಾರ್ಯಗತಗೊಳಿಸಿ ಅವರು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇನ್ನಷ್ಟು...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.