ADVERTISEMENT

ಮೋದಿ ಯುಗದಲ್ಲಿ ಅರ್ಹರಿಗಷ್ಟೇ ಆದ್ಯತೆ, ಮಿಷನ್ ದಕ್ಷಿಣ ತಂತ್ರಗಾರಿಕೆಯಲ್ಲ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜುಲೈ 2022, 6:50 IST
Last Updated 7 ಜುಲೈ 2022, 6:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಮಿಷನ್ ದಕ್ಷಿಣ’ ಎಂದರೆ ಕೇವಲ ಅಧಿಕಾರ ಹಿಡಿಯುವ ರಾಜಕೀಯ ತಂತ್ರಗಾರಿಕೆಯಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

‘ಮಿಷನ್ ದಕ್ಷಿಣ’ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ದಕ್ಷಿಣದ ರಾಜ್ಯಗಳ ಭಾಷಾ ಅಸ್ಮಿತೆ, ಸಾಧನೆ, ಜ್ಞಾನ ಭಂಡಾರ, ಅಭಿವೃದ್ಧಿ ಎಲ್ಲದಕ್ಕೂ ಗೌರವ ನೀಡುವುದಾಗಿದೆ’ ಎಂದಿದೆ.

‘ಭಾರತ ರತ್ನ ಸೇರಿದಂತೆ ದೇಶದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಒಂದು ಕುಟುಂಬ ಹಾಗೂ ಆ ಕುಟುಂಬದ ಗುಣಗಾನ ಮಾಡುತ್ತಿದ್ದವರಿಗೆ ನೀಡುತ್ತಿದ್ದ ಕಾಲದ ಯುಗಾಂತ್ಯವಾಗಿದೆ. ಮೋದಿ ಯುಗದಲ್ಲಿ ಅರ್ಹರಿಗೆ ಮಾತ್ರ ಆದ್ಯತೆ. ಇದಕ್ಕೆ ರಾಜ್ಯಸಭೆಗೆ ನಾಮನಿರ್ದೇಶಿತಗೊಂಡ ಸದಸ್ಯರ ಸಾಧನೆಯೇ‌ ಸಾಕ್ಷಿ’ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

‘ಪ್ರತಿಭೆ ಹಾಗೂ ಅರ್ಹತೆಯನ್ನೇ ಮೋದಿ ಸರ್ಕಾರ ಮಾನದಂಡವಾಗಿ ಪರಿಗಣಿಸುತ್ತದೆ ಎಂಬುದಕ್ಕೆ ರಾಜ್ಯ ಸಭಾ ನಾಮನಿರ್ದೇಶಿತರೇ ಸಾಕ್ಷಿಯಾಗಿದ್ದಾರೆ‌. ರಾಷ್ಟ್ರದ ಕೀರ್ತಿ ಎತ್ತಿ ಹಿಡಿಯುವುದರಲ್ಲಿ ದಕ್ಷಿಣ ರಾಜ್ಯಗಳ ಈ ಪ್ರತಿಯೊಂದು ‘ಪ್ರತಿಭಾ ವಜ್ರ’ಗಳ ಕೊಡುಗೆ ಅಪಾರ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.