ADVERTISEMENT

‘ಹೀರೋನ ವಿಲನ್ ಮಾಡ್ತೀರಿ, ವಿಲನ್‌ನ ಹೀರೋ ಮಾಡ್ತೀರಿ’: ರಮೇಶ ಜಾರಕಿಹೊಳಿ ಕಿಡಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 10:30 IST
Last Updated 24 ಡಿಸೆಂಬರ್ 2018, 10:30 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಂಗಳೂರು: ‘ಹೀರೋನ ವಿಲನ್ ಮಾಡ್ತೀರಿ, ವಿಲನ್‌ನಹೀರೋ ಮಾಡ್ತೀರಿ’ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದಅವರು,‘ನನ್ನ ರಾಜೀನಾಮೆ ಬಗ್ಗೆ ಸುದ್ದಿ ಮಾಡುತ್ತಿದ್ದೀರಿ. ನಾಲ್ಕು ದಿನ ಸಮಯ ಕೊಡಿ, ರಾಜೀನಾಮೆ ಯಾವಾಗ ಎಂದುತಿಳಿಸುತ್ತೇನೆ’ ಎಂದು ಹೇಳಿದರು.

‘ನನ್ನ ಜೊತೆ ಇರುವ ಶಾಸಕರ ಬಗ್ಗೆ ನಿಮಗೆ ಏಕೆ ಹೇಳಬೇಕು? ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ’ ಎಂದರು.

‘ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದೇನೆ. ನಿನ್ನೆಯೂ ರಾಜೀನಾಮೆ ಹೇಳಿಕೆ ಕೊಟ್ಟಿದ್ದೆ. ಆದ್ದರಿಂದ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನಾನು ವೇಣುಗೋಪಾಲ್ ಭೇಟಿ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ADVERTISEMENT

ರಮೇಶ ಜಾರಕಿಹೊಳಿ ಪಕ್ಷ ಬಿಟ್ಟು ಹೋಗಲ್ಲ: ಖರ್ಗೆ
ಕಲಬುರ್ಗಿ:
ರಮೇಶ ಜಾರಕಿಹೊಳಿ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದ ಇಕ್ಬಾಲ್ ಕಾಲೊನಿಯಲ್ಲಿ ಸ್ಮಶಾನ ಭೂಮಿ ಹಾಗೂ ಹೀರಾಪುರ ಕ್ರಾಸ್‌ವರೆಗೆ ಸಿ.ಸಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿಗೆ ಸಂಸದ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಪಕ್ಷದಲ್ಲೆ ಇದ್ದು ಬಲವರ್ಧನೆ ಮಾಡುತ್ತಾರೆ. ರಮೇಶ ರಾಜೀನಾಮೆ ನೀಡುತ್ತಾರೆ ಎಂಬುದು ಕೇವಲ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎಂದರು.

ಜಾರಕಿಹೋಳಿ ಸಹೋದರರ ಮಧ್ಯೆ ಒಡಕು ಮೂಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ರಮೇಶ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರನ್ನು ವಿಲನ್ ಅಂತಾ ಯಾರೂ ಟ್ರೀಟ್ ಮಾಡಿಲ್ಲ.

ಪಕ್ಷದಲ್ಲಿನ ಬಿಕ್ಕಟ್ಟು ಶಮನವಾಗುನ ನಂಬಿಕೆ ಇದೆ. ರಾಜ್ಯ ನಾಯಕರು ಬಂಡಾಯ ಶಮನ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಸಮಾಧಾನ, ವೈಮನಸ್ಸು ಕೆಲದಿನ ಇರುತ್ತದೆ. ಆ ಬಳಿಕ ಎಲ್ಲವೂ ಸರಿ ಹೋಗುತ್ತದೆ. ಹೀಗಾಗಿ ರಮೇಶ ಜಾರಕಿಹೊಳಿ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಪುನರುಚ್ಚರಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.