ADVERTISEMENT

‘ರೆಸಾರ್ಟ್ ರಾಜಕೀಯ ಆರಂಭಿಸಿದ್ದೇ ಬಿಜೆಪಿ’

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 18:42 IST
Last Updated 20 ಜನವರಿ 2019, 18:42 IST
ದೇವೇಗೌಡ
ದೇವೇಗೌಡ   

ತುಮಕೂರು: ‘ರೆಸಾರ್ಟ್ ರಾಜಕೀಯ ಆರಂಭಿಸಿದ್ದೇ ಬಿಜೆಪಿ. ನಾವು ಎಂದೂ ಆ ರೀತಿಯ ಕೆಲಸ ಮಾಡಿಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ಐನಾಪುರ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2008ರಲ್ಲಿ ಸರ್ಕಾರ ರಚಿಸಲು ಬಿಜೆಪಿಯವರಿಗೆ 113 ಶಾಸಕರ ಬಲ ಇರಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‌ನ ಕೆಲ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ರಾತ್ರೋರಾತ್ರಿ ರಾಜೀನಾಮೆ ಕೊಡಿಸಿದರು. ಉಪ ಚುನಾವಣೆ ಬಳಿಕ ಅವರನ್ನು ಮಂತ್ರಿ ಮಾಡಿದರು’ ಎಂದು ನೆನಪಿಸಿಕೊಂಡರು.

‘ಕಾಂಗ್ರೆಸ್ ಪಕ್ಷದವರು ರೆಸಾರ್ಟ್‌ಗೆ ಹೋಗಿದ್ದು ಲೋಕಸಭೆ ಚುನಾವಣೆ ಕುರಿತು ಶಾಸಕರ ಜೊತೆ ಚರ್ಚಿಸಲು. ಅಲ್ಲಿ ಬೇರೆ ಚರ್ಚೆಗಳು ನಡೆದಿಲ್ಲ’ ಎಂದರು.

ADVERTISEMENT

‘ಮಾಧ್ಯಮದವರು ತುಂಬಾ ಸೃಷ್ಟಿ ಮಾಡುತ್ತಿರಾ. ಸೃಷ್ಟಿ ಮಾಡುವ ಶಕ್ತಿ ನಿಮಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಸರ್ಕಾರಕ್ಕೆ ಅಸ್ಥಿರದ ಭಯ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.