
ಚಿತ್ರ: ಪ್ರಜಾವಾಣಿ
ವೃಕ್ಷಮಾತೆ ಎಂದೇ ಖ್ಯಾತಿ ಪಡೆದಿರುವ ಸಾಲು ಮರದ ತಿಮ್ಮಕ್ಕನವರು ನವೆಂಬರ್14 ರಂದು (ಶುಕ್ರವಾರ) ಇಹಲೋಕ ತ್ಯಜಿಸಿದ್ದಾರೆ. ತಿಮ್ಮಕ್ಕನವರು ತಮ್ಮ ಬದುಕನ್ನು ಪರಿಸರ ಕಾಳಜಿಗಾಗಿ ಮೂಡುಪಿಟ್ಟಿದ್ದರು. ಅವರ ಪರಿಸರ ಕಾಳಜಿಯನ್ನು ಗುರುತಿಸಿದ ಪ್ರಜಾವಾಣಿ ಮೊಟ್ಟ ಮೊದಲ ಬಾರಿಗೆ 31 ವರ್ಷಗಳ ಹಿಂದೆಯೇ ವಿಶೇಷ ಲೇಖನವೊಂದನ್ನು ಪ್ರಕಟಿಸಿತ್ತು.
ತಿಮ್ಮಕ್ಕನವರ ಪರಿಸರ ಕಾಳಜಿ ಗುರುತಿಸಿದ ಪ್ರಜಾವಾಣಿಯು 31 ವರ್ಷಗಳ ಹಿಂದೆ 1994ರ ಸೆ. 19ರಂದು ಭಾನುವಾರ ಪ್ರಕಟವಾದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಿಸಿತ್ತು. ಈ ಲೇಖನವನ್ನು ಎಂ.ವಿ. ನೆಗಳೂರು ಎಂಬುವವರು ಬರೆದಿದ್ದರು.
ಈ ಸುಧೀರ್ಘ ಲೇಖನದಲ್ಲಿ ಸಾಲು ಮರದ ತಿಮ್ಮಕ್ಕನವರು ಮರಗಳನ್ನು ನೆಟ್ಟು ಪ್ರೀತಿಯಿಂದ ಸಾಕಿ ಸಲಹಿದ ಪರಿ, ತಿಮ್ಮಕ್ಕನವರು ಎದುರಿಸಿದ ಸವಾಲುಗಳನ್ನು ‘ಸಾಲುಮರದ ಸಂಗಾತಿ ತಿಮ್ಮಕ್ಕ’ ಎಂಬ ವಿಶೇಷ ಲೇಖನದಲ್ಲಿ ಕಟ್ಟಿಕೊಡಲಾಗಿತ್ತು.
ಪೂರ್ತಿ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.