
ಬೆಂಗಳೂರು: ಶಾಲಾ ಸಿನಿಮಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (School Cinema International Film Festival) 2025ಕ್ಕೆ ಮಕ್ಕಳ ದಿನಾಚರಣೆಯಂದು ಬೆಂಗಳೂರಿನ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಚಾಲನೆ ನೀಡಲಾಯಿತು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗಣ್ಯರು ಭಾಗವಹಿಸಿದ್ದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಫ್ರಾನ್ಸ್, ಸ್ಪೇನ್, ಜರ್ಮನಿ, ಯುಎಇ, ರಷ್ಯಾ, ಕಿರ್ಗಿಸ್ತಾನ್ ಸೇರಿದಂತೆ ಇನ್ನೂ ಅನೇಕ ದೇಶಗಳಗಳ ಮಕ್ಕಳು ಭಾಗವಹಿಸಿದ್ದರು. ಈ ಚಲನಚಿತ್ರೋತ್ಸವವು ನವೆಂಬರ್ 14ರಿಂದ 30 ನಡುವೆ ಭಾರತದಾದ್ಯಂತ ವಿವಿಧ ಶಾಲೆಗಳಲ್ಲಿ ಜರುಗಲಿದೆ.
ಶಾಲಾ ಸಿನಿಮಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ.
ಈ ಚಲನಚಿತ್ರ ಉತ್ಸವ ಭಾರತದಾದ್ಯಂತ 40,000ಕ್ಕೂ ಅಧಿಕ ಸರ್ಕಾರಿ ಮತ್ತು 1,000 ಖಾಸಗಿ ಶಾಲೆಗಳನ್ನು ತಲುಪುವ ಗುರಿ ಹೊಂದಿದೆ. ಕಾರ್ಯಕ್ರಮವು ಸಿನಿಮಾಗಳ ಮೂಲಕ ಸೃಜನಶೀಲತೆ, ಸಹಾನುಭೂತಿ ಮತ್ತು ಕಲಿಕೆಯನ್ನು ರಾಷ್ಟ್ರವ್ಯಾಪಿ ಹರಿಡಿಸುವ ಗುರಿ ಹೊಂದಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಚಿತ್ರೋತ್ಸವದ ನಿರ್ದೇಶಕ ಸೈಯದ್ ಸುಲ್ತಾನ್ ಅಹ್ಮದ್ ‘ಮಕ್ಕಳು ಅತ್ಯುತ್ತಮ ಚಲನಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಅವಕಾಶ ಸಿಗುತ್ತದೆ. ಏಕೆಂದರೆ ಅವುಗಳನ್ನು ಉತ್ಸವಗಳಲ್ಲಿ ಮಾತ್ರ ಪ್ರದರ್ಶಿಸಲಾಗುತ್ತದೆ. ಆದ್ದರಿಂದ ನಾವು ಚಲನಚಿತ್ರಗಳನ್ನು ನೇರವಾಗಿ ಶಾಲೆಗಳಿಗೆ ತರುವ ಮೂಲಕ ಉತ್ಸವವನ್ನು ಅವರ ಬಳಿಗೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಆ ರೀತಿಯಲ್ಲಿ, ಪ್ರತಿ ಮಗುವೂ ಉತ್ತಮ ಗುಣಮಟ್ಟದ ಸಿನೆಮಾವನ್ನು ನೋಡಲು ಸಾಧ್ಯ’ ಎಂದು ಹೇಳಿದ್ದಾರೆ.
ದೆಹಲಿ ಪಬ್ಲಿಕ್ ಶಾಲೆ (DPS) ಪ್ರಾಂಶುಪಾಲರಾದ ಅನಿತಾ ಬಿಜೇಶ್ ಮಾತನಾಡಿ, ‘ಪ್ರದರ್ಶನಗಳು, ಕಾರ್ಯಾಗಾರಗಳು ಮತ್ತು ಚಲನಚಿತ್ರ ನಿರ್ಮಾಣ ಸವಾಲುಗಳೊಂದಿಗೆ ಎಸ್‌ಸಿಐಎಫ್‌ಎಫ್–2025 ಶಾಲೆಗಳನ್ನು ಸೃಜನಶೀಲ ಕಲಿಕೆಯ ಕೇಂದ್ರಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಕಥೆಗಾರರು ಮತ್ತು ಚಿಂತಕರು ಯುವ ಪೀಳಿಗೆಯನ್ನು ಪ್ರೇರೇಪಿಸಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.