ADVERTISEMENT

ಸಾರಿಗೆ ಸಂಸ್ಥೆ ನಷ್ಟಕ್ಕೆ 'ಶಕ್ತಿ ಯೋಜನೆ' ಕಾರಣ ಅಲ್ಲ: ಸಚಿವ ರಾಮಲಿಂಗಾ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 22:48 IST
Last Updated 25 ಫೆಬ್ರುವರಿ 2026, 22:48 IST
<div class="paragraphs"><p>ರಾಮಲಿಂಗಾ ರೆಡ್ಡಿ&nbsp;</p></div>

ರಾಮಲಿಂಗಾ ರೆಡ್ಡಿ 

   

ಕೆಜಿಎಫ್‌: ‘ಸಾರಿಗೆ ಸಂಸ್ಥೆಗಳ ನಷ್ಟಕ್ಕೆ ಶಕ್ತಿ ಯೋಜನೆ ಕಾರಣ ಅಲ್ಲ. ಬಿಜೆಪಿ ಸರ್ಕಾರದ ಅವಧಿಯಿಂದಲೂ ಸಾರಿಗೆ ಸಂಸ್ಥೆ ನಷ್ಟದಲ್ಲಿತ್ತು’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. 

ರಾಬರ್ಟಸನ್‌ಪೇಟೆಯಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಗೂ ಸಾರಿಗೆ ಸಂಸ್ಥೆ ನಷ್ಟಕ್ಕೂ ಸಂಬಂಧವಿಲ್ಲ. ನಷ್ಟ ಸರಿದೂಗಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ’ ಎಂದರು. 

ADVERTISEMENT

‘ಜನರಿಗೆ ಸವಲತ್ತು ಕೊಡುವುದು ಉದ್ದೇಶ. ನಮ್ಮಲ್ಲಿ ಶೇ 35ರಷ್ಟು ಲಾಭ ಬರುತ್ತಿದೆ. ನಷ್ಟವಾದರೂ ಬಸ್‌ ಓಡಿಸುತ್ತೇವೆ. ಇಲ್ಲಿ ಲಾಭದ ದೃಷ್ಟಿ ಇಲ್ಲ. ಖಾಸಗಿಯವರು ಲಾಭ ಇಲ್ಲದಿದ್ದರೆ ಬಸ್‌ ಓಡಿಸುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.