
ಬಸವರಾಜು ಶಿವಗಂಗಾ
ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆದವರು. ಅವರು ಕೊಟ್ಟ ಭರವಸೆ ಈಡೇರಿಸಲಿ’ ಎಂದು ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಕುರ್ಚಿ ಸದ್ಯ ಖಾಲಿ ಇಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಯಾಗಿ ಇರುತ್ತಾರೆಂದು ಹೈಕಮಾಂಡ್ ಹೇಳಿದರೆ ಅದಕ್ಕೆ ನಾವೂ ಬದ್ಧ’ ಎಂದರು.
‘ಶಾಸಕರಾದ ಬಸವರಾಜ ರಾಯರಡ್ಡಿ, ಕೆ.ಎನ್. ರಾಜಣ್ಣ, ನಾನು ಯಾರೂ ಹೈಕಮಾಂಡ್ ಅಲ್ಲ. ಅವರ ಮಾತುಗಳನ್ನು ಪರಿಗಣಿಸುವ ಅಗತ್ಯವೂ ಇಲ್ಲ. ಹೈಕಮಾಂಡ್ ಮಾತಿಗೆ ನಾವೆಲ್ಲರೂ ಬದ್ಧ’ ಎಂದರು.
‘ನುಡಿದಂತೆ ನಡೆಯಬೇಕೆಂದು ಕೆ.ಎನ್. ರಾಜಣ್ಣ ಹೇಳಿದ್ದಾರೆ. ಹೈಕಮಾಂಡ್ ಮುಂದೆ ಏನಾದರೂ ಒಪ್ಪಂದ ಆಗಿದ್ದರೆ ಅವರು ಮಾತನಾಡಲಿ. ಒಪ್ಪಂದ ಆಗಿದ್ದರೆ ಹೈಕಮಾಂಡ್ ಹೇಳಬೇಕು’ ಎಂದರು.
‘ಪ್ರತಿಯೊಬ್ಬ ಶಾಸಕರಿಗೂ ಅವರದ್ದೇ ಆದ ಗೌರವವಿದೆ. ಒಬ್ಬರಿಗೆ ನೋಟಿಸ್ ಕೊಡುವುದು, ಮತ್ಯಾರಿಗೊ ಕೊಡದೇ ಇರುವುದು ಸರಿಯಲ್ಲ’ ಎಂದ ಅವರು, ‘ಸಂಕ್ರಾಂತಿ ಬಳಿಕ ನಾನು ಮಾತನಾಡುತ್ತೇನೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.