ADVERTISEMENT

ಸಿಂದಗಿ ಪುರಸಭೆ ಚುನಾವಣೆ: 11ರಲ್ಲಿ ಕಾಂಗ್ರೆಸ್ ಗೆಲುವು, ಜೆಡಿಎಸ್‌ಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 5:28 IST
Last Updated 11 ಫೆಬ್ರುವರಿ 2020, 5:28 IST
   

ಸಿಂದಗಿ (ವಿಜಯಪುರ): ಸಿಂದಗಿ ಪುರಸಭೆ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, 23 ಸ್ಥಾನಗಳ ಪೈಕಿ ಕಾಂಗ್ರೆಸ್ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಜೆಡಿಎಸ್ ಕೇವಲ 6 ಸ್ಥಾನಗಳು ಪಡೆದುಕೊಂಡಿವೆ. ಬಿಜೆಪಿ ಕಳೆದ ಬಾರಿ ಗೆದ್ದಿದ್ದ3 ಸ್ಥಾನಗಳನ್ನು ಉಳಿಸಿಕೊಂಡಿದೆ. ಮೂವರು ಪಕ್ಷೇತರರು ಚುನಾಯಿತರಾಗಿದ್ದಾರೆ. ಬಹುಮತಕ್ಕೆ 12 ಸ್ಥಾನಗಳು ಬೇಕಿವೆ. ಪಕ್ಷೇತರರಲ್ಲಿ 21 ನೇ ವಾರ್ಡನಲ್ಲಿ ಆಯ್ಕೆಯಾಗಿರುವ ಗೊಲ್ಲಾಳಪ್ಪ ಬಂಕಲಗಿ ಕಾಂಗ್ರೆಸ್ಸಿಗರೇಆಗಿದ್ದು ಟಿಕೆಟ್ ವಂಚಿತರಾಗಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷ ಪಕ್ಷೇತರ ಅಭ್ಯರ್ಥಿ ನೆರವಿನಿಂದ ಅಧಿಕಾರ ಗದ್ದುಗೆ ಏರುವ ನಿರೀಕ್ಷೆ ಇದೆ.

13ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ, ಶಾಸಕ ಎಂ.ಸಿ.ಮನಗೂಳಿ ಪುತ್ರ ಡಾ.ಶಾಂತವೀರ ಮನಗೂಳಿ ಗೆಲುವು ಸಾಧಿಸಿದ್ದಾರಾದರೂ, ಅಧ್ಯಕ್ಷ ಸ್ಥಾನದ ಕನಸು ಛಿದ್ರಗೊಂಡಿದೆ. ಪ್ರಸ್ತುತ ಚುನಾವಣೆಯಲ್ಲಿ ಮನಗೂಳಿ ಕುಟುಂಬಕ್ಕೆ ಭಾರಿ ಮುಖಭಂಗವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.