ADVERTISEMENT

ಗ್ರೀಸ್‌ನಲ್ಲಿ ನಡೆದ ಕರಾಟೆ ಚಾಂಪಿಯನ್‌ಶಿಪ್‌: ಬೆಂಗಳೂರಿನ ಗಗನಾ, ಖುಷಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 14:28 IST
Last Updated 2 ಅಕ್ಟೋಬರ್ 2023, 14:28 IST
ಗಗನಾ ಎಸ್.
ಗಗನಾ ಎಸ್.   

ಬೆಂಗಳೂರು: ಗ್ರೀಸ್‌ನಲ್ಲಿ ಭಾನುವಾರ ನಡೆದ 30ನೇ ಎಸ್‌ಕೆಡಿಯುಎನ್ ವಿಶ್ವ ಶೋಟೋಕಾನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಲ್ಲೇಶ್ವರದ ಕ್ಲೂನಿ ಕಾನ್ವೆಂಟ್‌ನ ವಿದ್ಯಾರ್ಥಿಗಳಾದ ಗಗನಾ ಎಸ್. ಮತ್ತು ಖುಷಿ ಸುಧೀರ್ ಅವರು ‘ಡುವೋ ಕಟಾ’ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಯುನಿಫೈಟ್ ಗ್ರೀಸ್ ಮತ್ತು ಟಕಿಶೋಕು ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಸಹಯೋಗದಲ್ಲಿ ವಿಶ್ವಸಂಸ್ಥೆಯ ಶೋಟೊಕಾನ್ ಕರಾಟೆ-ಡೊ ಈ ಸ್ಪರ್ಧೆಯನ್ನು ಆಯೋಜಿಸಿತ್ತು.

ಅಲ್ಲದೆ, ಮಿಶ್ರ ಜೋಡಿಯಲ್ಲಿ ಗಗನಾ ಬೆಳ್ಳಿ ಗೆದ್ದಿದ್ದಾರೆ. ಕಿಹೊನ್ ಇಪ್ಪಾನ್ ಮತ್ತು ಸನ್ಬನ್ ಕುಮಿಟೆ ವಿಭಾಗದಲ್ಲಿ ಗಗನಾ ಮತ್ತು ಖುಷಿ ಇಬ್ಬರೂ ಕಂಚು ಗೆದ್ದಿದ್ದಾರೆ.

ADVERTISEMENT

ಗಗನಾ 8ನೇ ತರಗತಿ, ಖುಷಿ 6ನೇ ತರಗತಿಯಲ್ಲಿ ಓದುತ್ತಿದ್ದಾರೆ. ಅದೇ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಆಶ್ಲೇಷಾ ಅನಂತ್ ಅವರು ಕಿಹೊನ್ ಇಪ್ಪಾನ್‌ನಲ್ಲಿ ಕಂಚು ಗೆದ್ದಿದ್ದಾರೆ.

ಸಿಂಧಿ ಶಾಲೆಯ ಆದಿತ್ಯ, ಲಕ್ಷ್ಮಣ್ ಮತ್ತು ಶೀತಲ್ ಮೆನನ್ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಮಹಾಲಕ್ಷ್ಮಿ ವರುಣ್ ಮತ್ತು ಕಸ್ತೂರಿ ರಾಜೇಂದ್ರನ್ ತರಬೇತಿ ನೀಡುತ್ತಿದ್ದಾರೆ.

ಖುಷಿ ಸುಧೀರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.