ADVERTISEMENT

ಶ್ರೀಲಂಕಾದಲ್ಲಿ ರಾಜ್ಯದ ಏಳು ಮಂದಿ ನಾಪತ್ತೆ; ಒಬ್ಬರು ಸಾವು?

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 8:09 IST
Last Updated 22 ಏಪ್ರಿಲ್ 2019, 8:09 IST
   

ಬೆಂಗಳೂರು: ಶ್ರೀಲಂಕಾಕ್ಕೆ ಹೋಗಿದ್ದ ಬೆಂಗಳೂರಿನ ಏಳು ಮಂದಿ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ‌.

ನೆಲಮಂಗಲದ ಮಾರೇಗೌಡ, ಪುಟ್ಟರಾಜು, ಹನುಮಂತರಾಯಪ್ಪ ಹಾಗೂ ಸ್ನೇಹಿತರು ಇತ್ತೀಚೆಗೆ ಪ್ರವಾಸಕ್ಕೆ ಹೋಗಿದ್ದರು‌. ಬಾಂಬ್ ಸ್ಫೋಟದ ಬಳಿಕ ಅವರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿವೆ‌. ಸಂಬಂಧಿಕರು ಎಷ್ಟೇ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ.

ಸೋಮವಾರ ಬೆಳಿಗ್ಗೆ ಸ್ಫೋಟದಲ್ಲಿ ಸಾವಿಗೀಡಾಗಿರುವ ಇನ್ನೂ ಇಬ್ಬರು ಭಾರತೀಯರ ಹೆಸರುಗಳನ್ನುಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿ ಪ್ರಕಟಿಸಿದ್ದು, ಅದರಲ್ಲಿ ಕೆ.ಜಿ.ಹನುಮಂತರಾಯಪ್ಪ ಮತ್ತು ಎಂ.ರಂಗಪ್ಪ ಎಂದಿದೆ.

ADVERTISEMENT

ಪ್ರಜಾವಾಣಿ ಜೊತೆ ಮಾತನಾಡಿದ ಮಾರೇಗೌಡ ಅವರ ಸಂಬಂಧಿ, 'ಏಳು ಮಂದಿ ಶ್ರೀಲಂಕಾಕ್ಕೆ ಹೋಗಿದ್ದಾರೆ‌. ಅವರಿಗೆ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ತುಂಬಾ ಭಯವಾಗುತ್ತಿದೆ‌. ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ' ಎಂದರು.

'ನಾಪತ್ತೆಯಾದವರು ಮೃತಪಟ್ಟ ಬಗ್ಗೆ ಇದುವರೆಗೂ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಹೀಗಾಗಿ ಸದ್ಯ ಏನೂ ಹೇಳಲಾಗುವುದಿಲ್ಲ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.