ADVERTISEMENT

ತೇಜಸ್ವಿ ಸೂರ್ಯ 'ವಿವಾದಿತ ಟ್ವೀಟ್‍' ಡಿಲೀಟ್ ಮಾಡುವುದಿಲ್ಲ ಯಾಕೆ?

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 13:27 IST
Last Updated 30 ಏಪ್ರಿಲ್ 2019, 13:27 IST
ತೇಜಸ್ವಿ ಸೂರ್ಯ (ಕೃಪೆ: ಫೇಸ್‍ಬುಕ್)
ತೇಜಸ್ವಿ ಸೂರ್ಯ (ಕೃಪೆ: ಫೇಸ್‍ಬುಕ್)   

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಈ ಹಿಂದೆ ಮಾಡಿದ ಟ್ವೀಟ್‍ಗಳನ್ನೆಲ್ಲಾ ಕೆದಕಿ ಮೇಲೆತ್ತಲಾಗುತ್ತಿದೆ. ಇದರಲ್ಲಿ ಕೆಲವೊಂದು ಟ್ವೀಟ್‌ಗಳು ವಿವಾದಿತ ಟ್ವೀಟ್‍ಗಳಾಗಿವೆ.

ಈ ವಿವಾದಿತ ಟ್ವೀಟ್‍ಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ- ಚರ್ಚೆಗಳು ನಡೆಯುತ್ತಿದ್ದರೂ ತೇಜಸ್ವಿ ಸೂರ್ಯ ಅವರು ಟ್ವೀಟ್ ಡಿಲೀಟ್ ಮಾಡಿಲ್ಲ. ಯಾಕೆ ನೀವು ಟ್ವೀಟ್ ಡಿಲೀಟ್ ಮಾಡಿಲ್ಲ ಎಂದು ಎನ್‍ಡಿಟಿವಿ ತೇಜಸ್ವಿ ಸೂರ್ಯ ಅವರಲ್ಲಿ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ.

ನಾನು ವ್ಯತ್ಯಸ್ತಕಾರ್ಯವನ್ನು ಮಾಡಿದ್ದೇನೆ ಎಂದು ನನಗನಿಸುತ್ತಿಲ್ಲ.26,27, 28ರ ಹರೆಯದ ಯುವಕನಂತೆಯೇ ನಾನೂ ಮಾಡುತ್ತಿದ್ದೇನೆ. ನಾವೆಲ್ಲರೂ ಜೀವನವನ್ನು ರೂಪಿಸಿಕೊಳ್ಳುತ್ತೇವೆ. ಹಾಗಾಗಿಯೇ ನಾನು ಟ್ವೀಟ್‌ಗಳನ್ನು ಡಿಲೀಟ್ ಮಾಡುವುದಿಲ್ಲ.ಜನರು ಆ ಟ್ವೀಟ್‍ಗಳನ್ನು ಕೆದಕಿ ಅದರ ಸನ್ನಿವೇಶವನ್ನು ಅರಿಯದೆ ಮಾತನಾಡುತ್ತಾರೆ. ನಾನೊಬ್ಬ ಚಿಂತನಾಶೀಲ ವ್ಯಕ್ತಿ, ವಿಮರ್ಶಕ ಮತ್ತು ಚರ್ಚೆ ಮಾಡಲು ಇಷ್ಟ ಪಡುವ ವ್ಯಕ್ತಿ ಎಂಬುದು ಈ ಟ್ವೀಟ್‍ಗಳನ್ನು ನೋಡಿದರೆ ಗೊತ್ತಾಗುತ್ತದೆ.

ADVERTISEMENT

ತೇಜಸ್ವಿ ಸೂರ್ಯ ಅವರಿಗೆ ಟ್ವಿಟರ್‌ನಲ್ಲಿ 97 ಸಾವಿರದಷ್ಟು ಫಾಲೋವರ್‌ಗಳಿದ್ದಾರೆ.ಅವರ ವಿವಾದಿತ ಟ್ವೀಟ್‌ಗಳು ಹೆಚ್ಚು ಬಾರಿ ರೀಟ್ವೀಟ್ ಆಗಿವೆ.

ಹಾಗಾದರೆ ಈ ಹಿಂದೆ ಟ್ವೀಟ್ ಮಾಡಿರುವ ಟ್ವೀಟ್‍ಗಳ ಬಗ್ಗೆ ನಿಲುವು ಏನು ಎಂದು ಕೇಳಿದರೆ, ಕೆಲವೊಂದು ವಿಷಯಗಳಲ್ಲಿ ನಿಲುವು ಬದಲಿಸಿದ ಸಾಧ್ಯತೆ ಇದೆ. ಇನ್ನು ಕೆಲವು ವಿಷಯಗಳಲ್ಲಿ ಇಲ್ಲ. ಅದು ಆ ಸಂದರ್ಭವನ್ನು ಅವಲಂಬಿಸಿರುತ್ತದೆ. ನಾವು ಬದುಕು ರೂಪಿಸುತ್ತೇವೆ, ಬೆಳೆಯುತ್ತೇವೆ, ನಾವು ಮನುಷ್ಯರಲ್ಲವೇ? ನಾವು ಸ್ಥಾಯಿ ಅಲ್ಲ, ನಾವು ಪರಿಪೂರ್ಣ ಜೀವಿಗಳಾಗಿ ಹುಟ್ಟುತ್ತೇವೆ. ಇದೆಲ್ಲ ಕಲಿಕೆಯ ಅನುಭವಗಳು ಎಂದು ತೇಜಸ್ವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.