ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 25, 2023

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2023, 13:42 IST
Last Updated 25 ಮೇ 2023, 13:42 IST
ಈ ದಿನದ ಪ್ರಮುಖ 10 ಸುದ್ದಿಗಳು
ಈ ದಿನದ ಪ್ರಮುಖ 10 ಸುದ್ದಿಗಳು   

ದೆಹಲಿಯಲ್ಲಿ ಸಂಪುಟ ಸರ್ಕಸ್‌, ಲೋಕಸಭೆ ಚುನಾವಣೆ ಬಳಿಕ ಏನು ಬೇಕಾದರೂ ಆಗಬಹುದು, ವಿರೋಧ ಪಕ್ಷಗಳು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭ ಬಹಿಷ್ಕರಿಸುವುದು ತಪ್ಪು ಸೇರಿದಂತೆ ಈ ದಿನ ಗಮನ ಸೆಳೆದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ದೆಹಲಿಯಲ್ಲಿ ಸಂಪುಟ ಸರ್ಕಸ್‌: ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಸಿದ್ದು, ಡಿಕೆ ಲಾಬಿ

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌

ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೈಕಮಾಂಡ್‌ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಇದ್ದರು

ಈ ಸುದ್ದಿಯನ್ನು ಪೂರ್ತಿ ಓದಿ

ಲೋಕಸಭೆ ಚುನಾವಣೆ ಬಳಿಕ ಏನು ಬೇಕಾದರೂ ಆಗಬಹುದು: ಎಚ್.ಡಿ. ಕುಮಾರಸ್ವಾಮಿ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ

ಲೋಕಸಭಾ ಚುನಾವಣೆ ಬಳಿಕ ಈ ಸರ್ಕಾರದ ಭವಿಷ್ಯ ಏನು ಬೇಕಾದರೂ ಆಗಬಹುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಗುರುವಾರ ನಡೆದ ಜೆಡಿಎಸ್ ಆತ್ಮಾವಲೋಕನ ಸಭೆ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, 'ಈ ಸರ್ಕಾರದಲ್ಲಿ ವಿಶ್ವಾಸದ ಕೊರತೆ ಇದೆ. ಹೀಗಾಗಿ ಲೋಕಸಭಾ ಚುನಾವಣೆ ಬಳಿಕ ಸರ್ಕಾರದಲ್ಲಿ ಏನು ಬೇಕಾದರೂ ಆಗಬಹುದು' ಎಂದರು.

ADVERTISEMENT

ಈ ಸುದ್ದಿಯನ್ನು ಪೂರ್ತಿ ಓದಿ

ವಿರೋಧ ಪಕ್ಷಗಳು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭ ಬಹಿಷ್ಕರಿಸುವುದು ತಪ್ಪು: ಮಾಯಾವತಿ 

ಮಾಯಾವತಿ

ನೂತನ ಸಂಸತ್‌ ಭವನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡುವ ಸಮಾರಂಭವನ್ನು ವಿರೋಧ ಪಕ್ಷಗಳು ಬಹಿಷ್ಕರಿಸುವುದು ಸರಿಯಲ್ಲ ಎಂದು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಪೂರ್ತಿ ಓದಿ

ಖಾಲಿಸ್ತಾನ ಗುಂಪುಗಳಿಂದ ಅಪಾಯ ಸಾಧ್ಯತೆ: ಪಂಜಾಬ್ ಸಿಎಂ ಭಗವಂತ್ ಮಾನ್‌ಗೆ ಝಡ್+ ಭದ್ರತೆ

ಭಗವಂತ್ ಮಾನ್‌

ಖಾಲಿಸ್ತಾನ ಬೆಂಬಲಿಗರ ನಿಗ್ರಹಕ್ಕೆ ಕ್ರಮ ಕೈಗೊಂಡ ಕಾರಣ ಸಂಭವನೀಯ ಅಪಾಯವನ್ನು ಅರಿತು ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್‌ ಅವರಿಗೆ ಕೇಂದ್ರ ಸರ್ಕಾರವು ಝಡ್‌ ಪ್ಲಸ್‌ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಈ ಸುದ್ದಿಯನ್ನು ಪೂರ್ತಿ ಓದಿ

ಮೂರು ದಿನಗಳ ಅಂತರದಲ್ಲಿ ಚೀತಾದ 3 ಮರಿ ಸಾವು

ಮರಿಯೊಂದಿಗೆ ಚೀತಾ (ಪ್ರಾತಿನಿಧಿಕ ಚಿತ್ರ)

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೆರಡು ಚೀತಾ ಮರಿಗಳು ಮೃತಪಟ್ಟಿವೆ ಎಂದು ಅರಣ್ಯಾಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ಮೃತಪಟ್ಟ ಚೀತಾ ಮರಿಗಳ ಸಂಖ್ಯೆ ಮೂರಕ್ಕೇರಿದೆ. 

ಈ ಸುದ್ದಿಯನ್ನು ಪೂರ್ತಿ ಓದಿ

ತಿಹಾರ್‌ ಜೈಲಿನಲ್ಲಿ ಕುಸಿದು ಬಿದ್ದ ಸತ್ಯೇಂದ್ರ ಜೈನ್‌ಗೆ ಐಸಿಯುನಲ್ಲಿ ಚಿಕಿತ್ಸೆ

ಸತ್ಯೇಂದ್ರ ಜೈನ್‌

ತಿಹಾರ್‌ ಜೈಲಿನಲ್ಲಿ ಕುಸಿದು ಬಿದ್ದು ಆಸ್ಪತ್ರೆ ಸೇರಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದ್ರ ಜೈನ್‌ ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಿಸಲಾಗಿದೆ. ದೆಹಲಿಯ ಮಾಜಿ ಸಚಿವರೂ ಆಗಿರುವ ಜೈನ್ ಅವರು ಇಂದು (ಗುರುವಾರ) ಬೆಳಗ್ಗೆ ಸ್ನಾನಗೃಹದಲ್ಲಿ ತಲೆ ತಿರುಗಿ ಬಿದ್ದಿದ್ದರು.

ಈ ಸುದ್ದಿಯನ್ನು ಪೂರ್ತಿ ಓದಿ 

ಸಂಸತ್ ಭವನ ಉದ್ಘಾಟನೆಗೆ ‍ಪ್ರತಿಪಕ್ಷಗಳ ಬಹಿಷ್ಕಾರ: ಪರೋಕ್ಷ ಚಾಟಿ ಬೀಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ

ನೂತನ ಸಂಸತ್‌ ಭವನದ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿದ ವಿರೋಧ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಟಿ ಬೀಸಿದ್ದಾರೆ. ಮೂರು ದೇಶಗಳ ಪ್ರವಾಸ ಮುಗಿಸಿ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸ್ವಾಗತಿಸಿದರು. ಈ ವೇಳೆ ಅವರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು.

ಈ ಸುದ್ದಿಯನ್ನು ಪೂರ್ತಿ ಓದಿ

ಮುಂದಿನ ಜನವರಿಯಲ್ಲಿ ರಾಮ ಮಂದಿರ ಉದ್ಘಾಟನೆ: ಭರದಿಂದ ಸಾಗಿದೆ ಕಾಮಗಾರಿ

ರಾಮ ಮಂದಿರ

ರಾಮ ಮಂದಿರವನ್ನು ಮುಂದಿನ ವರ್ಷ ಜನವರಿ ವೇಳೆಗೆ ಉದ್ಘಾಟನೆ ಮಾಡಲು ಉದ್ದೇಶಿಸಲಾಗಿದ್ದು, ಹೀಗಾಗಿ ಉತ್ತರ ಪ್ರದೇಶ ಸರ್ಕಾರವು ಅಯೋಧ್ಯೆಯ ಏರ್‌ಪೋರ್ಟ್‌ ಹಾಗೂ ರೈಲು ನಿಲ್ದಾಣದ ಕಾಮಗಾರಿಗಳನ್ನು ಚುರುಕುಗೊಳಿಸಿದೆ.

ಈ ಸುದ್ದಿಯನ್ನು ಪೂರ್ತಿ ಓದಿ

  ‘ಗ್ಯಾರಂಟಿ’ ಭರವಸೆಗಳನ್ನು ಜಾರಿ ಮಾಡದಿದ್ದರೆ ಹೋರಾಟ: ಸಂಸದ ಪ್ರತಾಪ ಸಿಂಹ

ಪ್ರತಾಪ ಸಿಂಹ

‘ಜನ ಕಾಂಗ್ರೆಸ್‌ ಮುಖ ನೋಡಿ ಆರಿಸಿಲ್ಲ. ಗ್ಯಾರಂಟಿಗಳನ್ನು ನೋಡಿ ಆಯ್ಕೆ ಮಾಡಿದ್ದಾರೆ. ಅವನ್ನು ಎಲ್ಲರಿಗೂ ಅನ್ವಯವಾಗುವಂತೆ ಜೂನ್‌ 1ರೊಳಗೆ ಜಾರಿಗೊಳಿಸದಿದ್ದರೆ ನಾವು ಹೋರಾಟ ಮಾಡಿ ಜನರ ಧ್ವನಿಯಾಗುತ್ತೇವೆ’ ಎಂದು ಸಂಸದ ಪ್ರತಾಪ ಸಿಂಹ ಎಚ್ಚರಿಸಿದರು.

ಈ ಸುದ್ದಿಯನ್ನು ಪೂರ್ತಿ ಓದಿ

ನೂತನ ಸಂಸತ್ ಭವನ ರಾಷ್ಟ್ರಪತಿಯವರಿಂದಲೇ ಲೋಕಾರ್ಪಣೆಯಾಗಲಿ: ಸುಪ್ರೀಂಕೋರ್ಟ್‌ಗೆ ಮನವಿ

ಸುಪ್ರೀಂಕೋರ್ಟ್‌

ಹೊಸದಾಗಿ ನಿರ್ಮಿಸಲಾಗಿರುವ ಸಂಸತ್‌ ಭವನವನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಲೋಕಾರ್ಪಾಣೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ.

ಈ ಸುದ್ದಿಯನ್ನು ಪೂರ್ತಿ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.