ADVERTISEMENT

ಟ್ವಿಟರ್ ಯಾರನ್ನೂ ಬ್ಯಾನ್ ಮಾಡಬಾರದು: ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 8:28 IST
Last Updated 9 ಜನವರಿ 2021, 8:28 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ಬೆಂಗಳೂರು: ಟ್ವಿಟರ್ ಯಾರನ್ನೂ ಬ್ಯಾನ್ ಮಾಡಬಾರದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾತೆಯನ್ನು ಟ್ವಿಟರ್ ನಿಷೇಧಿಸಿರುವುದು ಪ್ರಜಾಪ್ರಭುತ್ವಕ್ಕೆ ಎಚ್ಚರಿಕೆ ಕರೆಗಂಟೆಯಾಗಿದೆ ಎಂದು ಬಿಜೆಪಿ ನಾಯಕ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಟ್ವಿಟರ್ ತುಂಬಾ ಇಂದು ಟ್ರಂಪ್ ಖಾತೆ ಶಾಶ್ವತವಾಗಿ ಸ್ಥಗಿತವಾಗಿರುವ ಸಂಗತಿ ಸದ್ದು ಮಾಡುತ್ತಿದೆ. ಈ ಮಧ್ಯೆ ಬಿಜೆಪಿ ಯುವನಾಯಕ ತೇಜಸ್ವಿ ಸೂರ್ಯ, ಟ್ವೀಟ್ ಮಾಡಿದ್ದು, ಯಾರದೇ ಖಾತೆಯನ್ನಾಗಲೀ ಟ್ವಿಟರ್ ಬ್ಲಾಕ್ ಮಾಡಬಾರದು. ಕಾಂಗ್ರೆಸಿಗನಾಗಿರಲಿ ಅಥವಾ ಬಿಜೆಪಿಗನಾಗಿರಲಿ, ಅದು ಸರಿಯಲ್ಲ. ದೇಶದಲ್ಲಿ ಈ ರೀತಿಯಾಗದಿರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಶ್ರೀವತ್ಸ ಟ್ವೀಟ್ ಮಾಡಿ, ಅಮಿತ್ ಮಾಳವೀಯ ಮತ್ತು ತೇಜಸ್ವಿ ಸೂರ್ಯ ಅವರ ಟ್ವಿಟರ್ ಅನ್ನು ಬ್ಯಾನ್ ಮಾಡಬೇಕು ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ, ಅಂತಹ ನಡೆ ಸರಿಯಲ್ಲ ಎಂದಿದ್ದಾರೆ.

ADVERTISEMENT

ಟ್ರಂಪ್ ಟ್ವಿಟರ್ ಸ್ಥಗಿತವಾಗಿರುವ ಬಗ್ಗೆ ಕೂಡ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆಗೇ ಈ ರೀತಿಯಾಗುತ್ತದೆ ಎಂದಾದರೆ, ಎಲ್ಲರಿಗೂ ಇದೇ ರೀತಿಯಲ್ಲಿ ಸಮಸ್ಯೆಯಾಗಬಹುದು. ಅದಕ್ಕಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದು ಉತ್ತಮ, ಪ್ರಜಾಪ್ರಭುತ್ವಕ್ಕೂ ಒಳ್ಳೆಯದು ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.