ADVERTISEMENT

ಪಹಣಿ ಹೊಂದಿರುವ ಸಂತ್ರಸ್ತರಿಗೆ ಹೊಸ ಮನೆ: ಸಚಿವ ಯು.ಟಿ.ಖಾದರ್ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 10:25 IST
Last Updated 23 ಆಗಸ್ಟ್ 2018, 10:25 IST
ಕುಶಾಲನಗರ ಪಟ್ಟಣದ ನೆರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ವಸತಿ ಸಚಿವ ಯು.ಟಿ.ಖಾದರ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.-ಪ್ರಜಾವಾಣಿ ಚಿತ್ರ
ಕುಶಾಲನಗರ ಪಟ್ಟಣದ ನೆರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ವಸತಿ ಸಚಿವ ಯು.ಟಿ.ಖಾದರ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.-ಪ್ರಜಾವಾಣಿ ಚಿತ್ರ   

ಕುಶಾಲನಗರ: ನೆರೆ ಪ್ರವಾಹದಿಂದ ಮನೆ ಕಳೆದುಕೊಂಡಿರುವ ಆರ್.ಟಿ.ಸಿ(ಪಹಣಿ) ಹೊಂದಿರುವ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಮೂಲಕ ಹೊಸದಾಗಿ ಮನೆ ನಿರ್ಮಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಹಾಗೂ ನರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ನೆರೆ ಪ್ರವಾಹಕ್ಕೆ ಸಿಲುಕಿರುವ ಪಟ್ಟಣದ ಜನವಸತಿ ಪ್ರದೇಶಕ್ಕೆ ಗುರುವಾರ ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು ಪರಿಸ್ಥಿತಿ ಅವಲೋಕಿಸಿದರು.

ಕಾವೇರಿ ನದಿ ಅಂಚಿನಲ್ಲಿರುವ ದಂಡಿನಪೇಟೆ ಬಡಾವಣೆ, ಅಯ್ಯಪ್ಪ ಸ್ವಾಮಿ ರಸ್ತೆಗಳಿಗೆ ಭೇಟಿ ನೀಡಿದ ಸಚಿವ ಖಾದರ್ ಅವರು ನೆರೆ ಪ್ರವಾಹದಿಂದ ಧರೆಗೆ ಉರುಳಿರುವ ಮನೆಗಳನ್ನು ಖುದ್ದುವೀಕ್ಷಿಸಿದರು. ಮನೆ ಕಳೆದುಕೊಂಡ ನಿವಾಸಿಗಳಿಗೆ ಧೈರ್ಯ ಹೇಳಿದರರು.

ADVERTISEMENT

ನಿಮ್ಮ ಕಷ್ಟಗಳಿಗೆ ನಾವಿದ್ದೇವೆ. ಪ್ರವಾಹದಿಂದ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ನದಿ ಅಂಚಿನಲ್ಲಿರುವ ನಿವಾಸಿಗಳು ಸರ್ಕಾರ ಪುನಾರ್ವಸತಿ ಕಲ್ಪಿಸುವ ಸ್ಥಳಗಳಿಗೆ ತೆರಳುವ ಮೂಲಕ ಉತ್ತಮ ಜೀವನ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭ ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯ ಪಿ.ವಿ.ಶಶಿಧರ್, ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮುಖಂಡರಾದ ಕೆ.ಕೆ.ಮಂಜುನಾಥ್,ಪ್ರಮೋದ್, ಚಂದ್ರು , ತಹಶೀಲ್ದಾರ್ ಮಹೇಶ್.ಪ.ಪಂ.ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.