ADVERTISEMENT

ಹಿರಿಯ ಸಂಶೋಧಕ, ಬರಹಗಾರ ಡಾ. ಚಿದಾನಂದಮೂರ್ತಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 19:21 IST
Last Updated 11 ಜನವರಿ 2020, 19:21 IST
ಡಾ. ಎಂ.ಚಿದಾನಂದಮೂರ್ತಿ
ಡಾ. ಎಂ.ಚಿದಾನಂದಮೂರ್ತಿ   

ಬೆಂಗಳೂರು: ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ (88) ಅಲ್ಪಕಾಲದ ಅಸೌಖ್ಯದಿಂದಶನಿವಾರ ಬೆಳಿಗ್ಗೆ ಇಲ್ಲಿನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಕನ್ನಡ ಶಕ್ತಿ ಕೇಂದ್ರದ ಮೂಲಕ ಕನ್ನಡ ಭಾಷಾ ಚಳವಳಿಗೆ ಹೊಸ ಆಯಾಮ ಕೊಟ್ಟಿದ್ದ ಚಿದಾನಂದ ಮೂರ್ತಿ ಅವರು ನಾಡಿನ ನೆಲ-ಜಲ-
ಭಾಷೆ-ಸಂಸ್ಕೃತಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು.

1931ರ ಮೇ 10ರಂದು ಚನ್ನಗಿರಿ ತಾಲ್ಲೂಕಿನ ಹಿರೆಕೋಗಲೂರಿನಲ್ಲಿ ಹುಟ್ಟಿದಅವರು, ಆರಂಭದ ಕೆಲವು ವರ್ಷ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡಿದ್ದರು. 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು. 1960ರಲ್ಲಿ ಮೈಸೂರು ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಅಧ್ಯಾಪಕರಾದರು. 1968ರಲ್ಲಿಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿ 1990ರಲ್ಲಿ ಸ್ವಯಂ ನಿವೃತ್ತಿ ಪಡೆದರು. 1988ರಲ್ಲಿ ‘ಕನ್ನಡ ಶಕ್ತಿಕೇಂದ್ರ’ವನ್ನು ಹುಟ್ಟುಹಾಕಿದ್ದರು.

ADVERTISEMENT

ಹಂಪಿ ವಿಶ್ವವಿದ್ಯಾಲಯ ಸ್ಥಾಪನೆಯ ರೂವಾರಿ: 1985ರಲ್ಲಿ ಕಾಲ್ನಡಿಗೆಯ ಮೂಲಕ ತುಮಕೂರಿನಿಂದ ಹಂಪಿಗೆ ಪ್ರಯಾಣ ಮಾಡುವಾಗ ಮೂರ್ತಿ ಅವರಿಗೆ ಕನ್ನಡಕ್ಕಾಗಿಯೇ ಒಂದು ಪ್ರತ್ಯೇಕ ವಿಶ್ವವಿದ್ಯಾಲಯ ಬೇಕು ಎನಿಸಿತು. ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಸರ್ಕಾರದ ಮೇಲೆ ಒತ್ತಡ ತಂದು ಸ್ಥಾಪನೆಗೆ ಕಾರಣರಾದರು.

ಭಾನುವಾರ ಅಂತ್ಯಸಂಸ್ಕಾರ: ವೀರಶೈವ–ಲಿಂಗಾಯತ ಪದ್ಧತಿಯಲ್ಲಿ ದೇಹವನ್ನು ಸಮಾಧಿ ಮಾಡುವ ಸಂಪ್ರದಾಯ ಇದೆ. ಆದರೆ ತಮ್ಮ ದೇಹಕ್ಕೆಅಗ್ನಿಸ್ಪರ್ಶ ಮಾಡಬೇಕು ಎಂಬ ಅವರ ಬಯಕೆಯಂತೆ ಭಾನುವಾರ 10.30ಕ್ಕೆ ಸುಮನಹಳ್ಳಿಯ ವಿದ್ಯುತ್ ಚಿತಾ
ಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.