ADVERTISEMENT

Vidhana Soudha Guided Tour: ವಿಧಾನಸೌಧಕ್ಕೆ 102 ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:44 IST
Last Updated 1 ಜೂನ್ 2025, 15:44 IST
ವಿಧಾನಸೌಧಕ್ಕೆ ಮಾರ್ಗದರ್ಶಿ ಕಾಲ್ನಡಿಗೆ ಪ್ರವಾಸದಲ್ಲಿ ಭಾನುವಾರ ಭಾಗಿಯಾಗಿದ್ದ ಸಾರ್ವಜನಿಕರು
ವಿಧಾನಸೌಧಕ್ಕೆ ಮಾರ್ಗದರ್ಶಿ ಕಾಲ್ನಡಿಗೆ ಪ್ರವಾಸದಲ್ಲಿ ಭಾನುವಾರ ಭಾಗಿಯಾಗಿದ್ದ ಸಾರ್ವಜನಿಕರು   

ಬೆಂಗಳೂರು: ‌ವಿಧಾನಸೌಧ ಮಾರ್ಗದರ್ಶಿ ಪ್ರವಾಸ ಯೋಜನೆಗೆ ಭಾನುವಾರ ಚಾಲನೆ ನೀಡಲಾಗಿದೆ. ಮೊದಲ ದಿನ 102 ಪ್ರವಾಸಿಗರು ಕಾಲ್ನಡಿಗೆ ಮೂಲಕ ವಿಧಾನಸೌಧ ವೀಕ್ಷಿಸಿದ್ದಾರೆ.

ಭಾನುವಾರ ನಾಲ್ಕು ತಂಡಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯಲಾಗಿತ್ತು. ಪ್ರತಿ ತಂಡದಲ್ಲಿ ತಲಾ 30 ಜನರು ಟಿಕೆಟ್‌ ಕಾಯ್ದಿರಿಸಿದ್ದರು. ಒಟ್ಟಯ 120 ಮಂದಿ ಟಿಕೆಟ್‌ ಕಾಯ್ದಿರಿಸಿದ್ದು, 102 ಮಂದಿ ಬಂದಿದ್ದರು ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ತಿಳಿಸಿದೆ. 

ಇಂಗ್ಲಿಷ್‌ನಲ್ಲಿ ವಿವರಣೆ ಜತೆಗೆ ಎರಡು ತಂಡ, ಕನ್ನಡದಲ್ಲಿ ವಿವರಣೆ ಜತೆಗೆ ಎರಡು ತಂಡಗಳನ್ನು ಕಾಲ್ನಡಿಗೆ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಸ್ಪಂದನ ವ್ಯಕ್ತವಾಗಿದೆ ಎಂದು ನಿಗಮವು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.