ADVERTISEMENT

ಶಾಲಾ ಕಾಲೇಜುಗಳಲ್ಲಿ ಭಾನುವಾರ 'ವಿಶ್ವಮಾನವ ದಿನ' ಆಚರಣೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 20:57 IST
Last Updated 27 ಡಿಸೆಂಬರ್ 2019, 20:57 IST
   

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಪ್ರಯುಕ್ತ ಭಾನುವಾರ ರಾಜ್ಯದ ಎಲ್ಲ ಶಾಲಾ, ಕಾಲೇಜುಗಳಲ್ಲಿ ‘ವಿಶ್ವಮಾನವ ದಿನ’ ಆಚರಿಸಲು ಸೂಚಿಸಲಾಗಿದೆ.

ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿಶ್ವಮಾನವ ಸಂದೇಶ ಕುರಿತಂತೆ ವಿಚಾರಗೋಷ್ಠಿ ನಡೆಸಬೇಕು ಎಂದು ಇಲಾಖೆಯ ನಿರ್ದೇಶಕರು ಶುಕ್ರವಾರ ಜ್ಞಾಪನಾ ಪತ್ರ ಕಳುಹಿಸಿದ್ದಾರೆ.

ಭಾನುವಾರ ಕಾರ್ಯಕ್ರಮ: ಕುವೆಂಪು ಅವರ ಬಗೆಗೆ ಅಪಾರವಾದ ಗೌರವವಿದೆ. ಸರ್ಕಾರದಿಂದ ಕೊನೆಯ ಕ್ಷಣದಲ್ಲಿ ಈ ಸುತ್ತೋಲೆ ಬಂದಿದ್ದು, ಶನಿವಾರವೇ ಎಲ್ಲ ಶಾಲೆಗಳಲ್ಲಿ ಮಾಹಿತಿ ನೀಡಿ, ಭಾನುವಾರ ಕಾರ್ಯಕ್ರಮ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.