ADVERTISEMENT

ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆ ರಮ್ಯಾ ಎಲ್ಲಿ ಹೋದರು?ಏನಿದು ರಹಸ್ಯ

ಏಜೆನ್ಸೀಸ್
Published 23 ನವೆಂಬರ್ 2018, 13:34 IST
Last Updated 23 ನವೆಂಬರ್ 2018, 13:34 IST
ರಮ್ಯಾ
ರಮ್ಯಾ   

ಬೆಂಗಳೂರು: ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆ ರಮ್ಯಾ ಎಲ್ಲಿ ಹೋದರು? ಅವರ ಮುಂದಿನ ನಡೆ ಏನು? ಎನ್ನುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಇದಕ್ಕೆ ಪುಷ್ಠಿ ನೀಡುವಂತೆ ರಮ್ಯಾ, ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ನೇತೃತ್ವದಲ್ಲಿ ನಡೆದ ಪಕ್ಷದ ಪ್ರಚಾರ ಸಮಿತಿ ಸಭೆಗಳಿಗೆ ಗೈರಾಗಿದ್ದರು.

2019ರ ಲೋಕಸಭಾ ಚುನಾವಣೆ ನಡೆಯಲಿದ್ದು, ಹೊಸ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕಳೆದ ಆಗಸ್ಟ್‌ನಲ್ಲಿ ಪ್ರಚಾರ ಸಮಿತಿಯೊಂದನ್ನು ರಚಿಸಿದ್ದರು. ಆದರೆ, ರಮ್ಯಾ ಕಳೆದ ಎರಡು ತಿಂಗಳಿನಿಂದ ಪಕ್ಷದ ಯಾವುದೇ ಡಿಜಿಟಲ್‌ ಸಂವಹನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ADVERTISEMENT

ರಮ್ಯಾ, ಕಳೆದ ಕೆಲವು ವಾರಗಳ ಹಿಂದೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಕಾಂಗ್ರೆಸ್‌ ಪಕ್ಷದ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆ ಎಂಬ ಪ್ರೋಫೈಲ್‌ ಅನ್ನು ತೆಗೆದು ಹಾಕಿದ್ದರು. ಈ ಹಿನ್ನೆಲೆ ಅವರು ತಮ್ಮ ಹುದ್ದೆ ತ್ಯಜಿಸಿರಬಹುದುಎಂಬ ಮಾತುಗಳು ಕೇಳಿ ಬಂದಿದ್ದವು. ಮೂರು ದಿನಗಳ ಬಳಿಕ ತಮ್ಮ ಮೊದಲಿದ್ದ ಪ್ರೋಫೈಲ್‌ ಅನ್ನೇ ಹಾಕಿಕೊಂಡಿದ್ದರು.

ಪಕ್ಷ ಪ್ರಚಾರ ಸಮಿತಿ ಸಭೆಗಳಿಂದ ಅವರು ದೂರು ಉಳಿದಿದ್ದು, ಹಲವರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.