ADVERTISEMENT

ರಿಯಲ್‌ ಎಸ್ಟೇಟ್‌ ಉದ್ಯಮಿಗೆ ಮಾತ್ರ ಟಿಕೆಟ್‌ ಏಕೆ: ರಮ್ಯಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 22:20 IST
Last Updated 6 ಸೆಪ್ಟೆಂಬರ್ 2022, 22:20 IST
ರಮ್ಯಾ
ರಮ್ಯಾ   

ಬೆಂಗಳೂರು: ‘ಶಾಸಕರಾಗಲುರಿಯಲ್‌ಎಸ್ಟೇಟ್‌ ಉದ್ಯಮಿಯೇ ಬೇಕೇ’ಎಂದು ನಟಿ ರಮ್ಯಾ ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘ನಗರದಲ್ಲಿರುವ ಶಾಸಕರು ಹಾಗೂ ಸಂಸದರಲ್ಲಿ ಎಷ್ಟು ಮಂದಿರಿಯಲ್‌ಎಸ್ಟೇಟ್‌ ವ್ಯವಹಾರದಲ್ಲಿದ್ದಾರೆ, ನಿಮಗೆ ಗೊತ್ತೇ? ಯಾರೋ ಹೇಳಿದರು, 28 ಶಾಸಕರಲ್ಲಿ 26 ಮಂದಿರಿಯಲ್‌ಎಸ್ಟೇಟ್‌‌ ವ್ಯವಹಾರದಲ್ಲಿದ್ದಾರಂತೆ. ಸಂಖ್ಯೆ ದಿಗ್ಭ್ರಮೆ ಮೂಡಿಸಿತು’ ಎಂದು ನಟಿ ದಿವ್ಯಾ ಸ್ಪಂದನ (ರಮ್ಯಾ) ಟ್ವೀಟ್‌ ಮಾಡಿದ್ದಾರೆ.

‘ಹಣ ಇರುವ ಜನರಿಗೆ (ಹೆಚ್ಚಾಗಿರಿಯಲ್‌ಎಸ್ಟೇಟ್‌ ವ್ಯವಹಾರದವರು) ಮಾತ್ರಸ್ಪರ್ಧಿಸಲುಟಿಕೆಟ್‌ ನೀಡಲಾಗುತ್ತದೆಏಕೆ? ಚುನಾವಣೆ ಆಯೋಗ ಒಬ್ಬ ಶಾಸಕನಿಗೆ ₹40 ಲಕ್ಷಮಾತ್ರವೆಚ್ಚ ಮಾಡಲು ಅನುಮತಿ ನೀಡುತ್ತದೆ. ಆದರೆ ಚುನಾವಣೆಗಳು ಕೋಟಿಗಳಲ್ಲಿ ನಡೆಯುತ್ತದೆ (ಈ ಬಗ್ಗೆ ಗಂಭೀರವಾಗಿ ಆಲೋಚಿಸಿರಿ). ಇದೆಲ್ಲದರ ಪರಿಣಾಮವೇ ಇದು...’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.