ADVERTISEMENT

ನಾಗಮಂಗಲ: ರಂಗಮಂದಿರದಿಂದ ಸುಮಲತಾ ಭಾವಚಿತ್ರ ತೆರವು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 19:30 IST
Last Updated 11 ಮಾರ್ಚ್ 2023, 19:30 IST
ನಾಗಮಂಗಲ ತಾಲ್ಲೂಕಿನ ಬಿದರಕೆರೆ ಗ್ರಾಮದದ ಪಿ.ಲಂಕೇಶ್ ರಂಗಮಂದಿರಲ್ಲಿ ಹಾಕಿದ್ದ ಸಂಸದೆ ಸುಮಲತಾ ಅವರ ಭಾವಚಿತ್ರವನ್ನು ಗ್ರಾಮದ ಯುವಕರು ತೆರವುಗೊಳಿಸಿದರು
ನಾಗಮಂಗಲ ತಾಲ್ಲೂಕಿನ ಬಿದರಕೆರೆ ಗ್ರಾಮದದ ಪಿ.ಲಂಕೇಶ್ ರಂಗಮಂದಿರಲ್ಲಿ ಹಾಕಿದ್ದ ಸಂಸದೆ ಸುಮಲತಾ ಅವರ ಭಾವಚಿತ್ರವನ್ನು ಗ್ರಾಮದ ಯುವಕರು ತೆರವುಗೊಳಿಸಿದರು   

ನಾಗಮಂಗಲ (ಮಂಡ್ಯ): ಸಂಸದೆ ಸುಮಲತಾ ಶುಕ್ರವಾರ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ಕುಪಿತರಾಗಿರುವ ತಾಲ್ಲೂಕಿನ ಬಿದರಕೆರೆ ಯುವಕರು ರಂಗಮಂದಿರದಲ್ಲಿ ಹಾಕಿದ್ದ ಸುಮಲತಾ ಅವರ ಭಾವಚಿತ್ರವನ್ನು ತೆರವುಗೊಳಿಸಿದ್ದಾರೆ.

ಅಂಬರೀಷ್ ಅವರು ಸಂಸದರಾಗಿದ್ದಾಗ ನೀಡಿದ್ದ ಅನುದಾನದಲ್ಲಿ ಪಿ.ಲಂಕೇಶ್ ಅವರ ಹೆಸರಿನಲ್ಲಿ ನಿರ್ಮಿಸಿದ್ದ ರಂಗಮಂದಿರದಲ್ಲಿ ಸುಮಲತಾ ಅವರ ಫೋಟೊವನ್ನೂ ಅಳವಡಿಸಲಾಗಿತ್ತು.

ಲಂಕೇಶ್ ಪತ್ರಿಕೆಯ‌ ಅಂಕಣಕಾರರಾಗಿದ್ದ ಬಿ.ಚಂದ್ರೇಗೌಡ ಅವರು ಪಿ.ಲಂಕೇಶ್‌ ಅವರ ಮೇಲಿನ ಪ್ರೀತಿ ಮತ್ತು ಅಭಿಮಾನದ ಪ್ರತೀಕವಾಗಿ ಗ್ರಾಮದಲ್ಲಿ ಲೋಕಸಭಾ ಸದಸ್ಯರ ಕ್ಷೇತ್ರಾಭಿವೃದ್ಧಿಯ ನಿಧಿಯ ಅನುದಾನದಲ್ಲಿ ಪಿ.ಲಂಕೇಶ್ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಿ ಗೌರಿ ಲಂಕೇಶ್ ಅವರಿಂದ ಉದ್ಘಾಟನೆ ಮಾಡಿಸಿದ್ದರು.

ADVERTISEMENT

‘ಸುಮಲತಾ ಅವರಿಂದ ಪ್ರಭಾವಿತರಾಗಿದ್ದ ಯುವಕರು ಅವರ ಫೋಟೊವನ್ನು ಹಾಕಿದ್ದರು. ಈಗ ಅವರ ನಿರ್ಧಾರದಿಂದ ನೋವಾಗಿದೆ, ನಮಗೆ ಅವರು ಮೋಸ ಮಾಡಿದ್ದಾರೆ ಎಂದು ಯುವಕರು ತಿಳಿಸಿದರು. ನಾವು ಮೂಕ ಪ್ರೇಕ್ಷಕರಾಗಬೇಕಾಯಿತು’ ಎಂದು ಬಿ.ಚಂದ್ರೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.