ADVERTISEMENT

ಮುಸ್ಲಿಂ ದ್ವೇಷ ತಡೆಗೆ ಪ್ರಗತಿಪರ ಚಿಂತಕರು ಒತ್ತಾಯ, ಒಗ್ಗಟ್ಟಿನ ಪತ್ರಿಕಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 19:39 IST
Last Updated 8 ಏಪ್ರಿಲ್ 2020, 19:39 IST
ಚಿಂತಕ ದೇವನೂರ ಮಹಾದೇವ
ಚಿಂತಕ ದೇವನೂರ ಮಹಾದೇವ   

ಬೆಂಗಳೂರು: ‘ಕೋವಿಡ್ –19 ಅನ್ನು ಒಂದು ಕೋಮಿನವರು ಹರಡುತ್ತಿದ್ದಾರೆ ಎಂದು ಸಮುದಾಯವನ್ನು ಗುರಿ ಮಾಡಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಟ್ಟಿನಿಟ್ಟನ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು’ ಎಂದು ಪ್ರಗತಿಪರ ಚಿಂತಕರು ಒತ್ತಾಯಿಸಿದ್ದಾರೆ.

ಚಿಂತಕ ದೇವನೂರ ಮಹಾದೇವ, ಎಚ್‌.ಎಸ್‌.ದೊರೆಸ್ವಾಮಿ,ಗಣೇಶದೇವಿ, ಜಿ. ರಾಮಕೃಷ್ಣ, ಎಸ್.ಜಿ.ಸಿದ್ದರಾಮಯ್ಯ, ಎಸ್. ಆರ್. ಹಿರೇಮಠ, ಪ್ರಸನ್ನ, ಇಂದಿರಾ ಕೃಷ್ಣಪ್ಪ, ಗದಗ ತೋಂಟದ ಸಿದ್ದರಾಮ ಸ್ವಾಮೀಜಿ, ನಾಗೇಶ ಹೆಗಡೆ, ದಿನೇಶ್‌ಅಮಿನಮಟ್ಟು, ಶಿವಸುಂದರ್, ಮುಜಫರ್‌ಅಸ್ಸಾದಿ, ಮಾಲತಿ ಪಟ್ಟಣಶೆಟ್ಟಿ ಸೇರಿ ನೂರಕ್ಕೂ ಹೆಚ್ಚು ಚಿಂತಕರು ಒಗ್ಗಟ್ಟಿನ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಒಂದು ಕೋಮನ್ನು ಗುರಿ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂಬ ಮುಖ್ಯಮಂತ್ರಿ ಘೋಷಣೆಯನ್ನು ಸ್ವಾಗತಿಸುತ್ತೇವೆ. ಎಚ್ಚರಿಕೆ ಮಾತ್ರ ಸಾಲದು’ ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

‘ಕೋವಿಡ್-19 ತಂದಿಟ್ಟಿರುವ ಸಾವು ಬದುಕಿನ ಹೋರಾಟದ ಕಾಲದಲ್ಲಿಯೂ ಕೊರೊನಾಗಿಂತ ವೇಗವಾಗಿ ಮುಸ್ಲಿಂ ದ್ವೇಷವನ್ನು ಹಬ್ಬಿಸಲಾಗುತ್ತಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲಾ ಧರ್ಮೀಯರೂ ಸಹಕರಿಸುತ್ತಿದ್ದಾರೆ. ಇದರಲ್ಲಿ ಮುಸ್ಲಿಮರೂ ಇದ್ದಾರೆ ಎಂಬುದನ್ನು ಮರೆಯುವಂತಿಲ್ಲ’ ಎಂದಿದ್ದಾರೆ.

‘ಅದೇ ಹೊತ್ತಲ್ಲಿ ‘ಉಗುಳಿ, ಸೀನಿ’ ಎಂದು ಅಸಂಬದ್ಧವಾಗಿ ಕರೆಕೊಟ್ಟ ಒಬ್ಬ ತಲೆಕೆಟ್ಟ ಸಾಫ್ಟ್‌ವೇರ್ ಉದ್ಯೋಗಿ ಮುಸ್ಲಿಮನಾಗಿರಬಹುದು. ಲಾಕ್‌ಡೌನ್‌ ಇದ್ದಾಗಲೂ 12 ಜನರು ಮಸೀದಿಗೆ ಹೋಗಿದ್ದು ತಪ್ಪು. ತಬ್ಲೀಗ್‌ ಸಭೆಗೆ ಹೋಗಿದ್ದನ್ನು ಕೆಲವರು ತಿಳಿಸದೇ ಇದ್ದದ್ದು ಖಂಡಿತವಾಗಿಯೂ ದೊಡ್ಡ ತಪ್ಪು. ಇಂಥ ತಪ್ಪನ್ನು ಇತರೆ ಧರ್ಮದ ವ್ಯಕ್ತಿಗಳೂ ಮಾಡಿದ್ದಾರೆ. ಕೆಲವು ಘಟನೆಗಳನ್ನು ಮುಂದೆ ಮಾಡಿಕೊಂಡು ಇಡೀ ಸಮುದಾಯವನ್ನು ದ್ವೇಷದಿಂದ ನೋಡುವಂತೆ ಪ್ರಚೋದಿಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.