ADVERTISEMENT

ಕದನ ವಿರಾಮದ 4ನೇ ದಿನ: ಹಮಾಸ್‌ನಿಂದ 11 ಇಸ್ರೇಲಿ ಒತ್ತೆಯಾಳುಗಳ ‌ಬಿಡುಗಡೆ

ಪಿಟಿಐ
Published 28 ನವೆಂಬರ್ 2023, 3:01 IST
Last Updated 28 ನವೆಂಬರ್ 2023, 3:01 IST
<div class="paragraphs"><p>ಹಮಾಸ್‌ನಿಂದ ಇಸ್ರೇಲಿ ಒತ್ತೆಯಾಳುಗಳ ‌ಬಿಡುಗಡೆ</p></div>

ಹಮಾಸ್‌ನಿಂದ ಇಸ್ರೇಲಿ ಒತ್ತೆಯಾಳುಗಳ ‌ಬಿಡುಗಡೆ

   

(ಚಿತ್ರ ಕೃಪೆ–ರಾಯಿಟರ್ಸ್‌)

ಟೆಲ್ ಅವಿವ್ (ಇಸ್ರೇಲ್): ಕದನ ವಿರಾಮ ಒಪ್ಪಂದದಂತೆ ಹಮಾಸ್‌ ಬಂಡುಕೋರರರು ಸೋಮವಾರ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ADVERTISEMENT

ಒತ್ತೆಯಾಳುಗಳನ್ನು ಗಾಜಾಪಟ್ಟಿಯಲ್ಲಿರುವ ರೆಡ್‌ಕ್ರಾಸ್‌ ಪ್ರತಿನಿಧಿಗಳಿಗೆ ಒಪ್ಪಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ದೃಢಪಡಿಸಿದೆ. ಕದನ ವಿರಾಮ ಘೋಷಣೆಯ 4ನೇ ದಿನವಾದ ಸೋಮವಾರ ಈ ಪ್ರಕ್ರಿಯೆ ನಡೆದಿದೆ.

'ಒಪ್ಪಂದದಂತೆ ಸೋಮವಾರ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಕೂಡ 33 ಮಂದಿ ಪ್ಯಾಲೆಸ್ಟೀನಿ ಕೈದಿಗಳನ್ನು ಬಿಡುಗಡೆ ಮಾಡಿದೆ' ಎಂದು ಕತಾರ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್ ಅನ್ಸಾರಿ ತಿಳಿಸಿದ್ದಾರೆ.

ಇಸ್ರೇಲ್‌ ಸರ್ಕಾರ ನ.22ರಂದು ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. 50 ಒತ್ತೆಯಾಳುಗಳ ಬಿಡುಗಡೆ ಷರತ್ತಿನೊಂದಿಗೆ ಕದನ ವಿರಾಮಕ್ಕೆ ಸಮ್ಮತಿಸಿತ್ತು. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು, ‘ಇದು ಯುದ್ಧದ ಮುಕ್ತಾಯವಲ್ಲ‘ ಎಂದು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.