ADVERTISEMENT

ಅಮೆರಿಕ ಸಂಸತ್‌ಗೆ ನಾಲ್ವರು ಹಿಂದೂ ಸಂಸದರ ಆಯ್ಕೆ: 119ನೇ US ಕಾಂಗ್ರೆಸ್‌ ಸ್ವಾಗತ

ಪಿಟಿಐ
Published 4 ಜನವರಿ 2025, 5:59 IST
Last Updated 4 ಜನವರಿ 2025, 5:59 IST
<div class="paragraphs"><p>@RepBera ಎಕ್ಸ್ ಚಿತ್ರ</p></div>
   

@RepBera ಎಕ್ಸ್ ಚಿತ್ರ

ವಾಷಿಂಗ್ಟನ್‌: ಅಮೆರಿಕದ ಸಂಸತ್‌ಗೆ ನಾಲ್ವರು ಹಿಂದೂ ಸಂಸದರು ಆಯ್ಕೆಯಾಗುವ ಮೂಲಕ ಹಿಂದೆಂದಿಗಿಂತಲೂ ಧಾರ್ಮಿಕ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಳವಾಗಿರುವುದಕ್ಕೆ 119ನೇ ಅಮೆರಿಕ ಕಾಂಗ್ರೆಸ್‌ ಸ್ವಾಗತಿಸಿದೆ.

ಕ್ರೈಸ್ತ ಅಥವಾ ಯಹೂದಿ ಧಾರ್ಮಿಕ ನಂಬಿಕೆ ಹೊಂದಿರದ 14 ಸಂಸದರು  ಈ ಬಾರಿ ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದವರೇ ಆಗಿದ್ದಾರೆ.

ADVERTISEMENT

ಇವರಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ತಲಾ ನಾಲ್ವರು ಸಂಸದರು ಹಾಗೂ ಬೌದ್ಧ ಧರ್ಮದ ಹಾಗೂ ಯುನಿಟೇರಿಯನ್‌ ಯೂನಿವರ್ಸಲಿಸ್ಟ್ಟ್‌ಗೆ ಸೇರಿದ ಮೂವರು ಸಂಸದರು ಅಮೆರಿಕ ಸಂಸತ್‌ ಪ್ರವೇಶಿಸಿದ್ದಾರೆ.

ಹಿಂದೂ ಧರ್ಮ ಅನುಸರಿಸುವ ಸುಹಾಸ್ ಸುಬ್ರಮಣಿಯಂ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ ಹಾಗೂ ಶ್ರೀ ಠಾಣೇದಾರ್‌ ಆಯ್ಕೆಯಾಗಿದ್ದಾರೆ. ‍ಭಾರತೀಯ ಅಮೆರಿಕನ್‌ ಆದ ಪ್ರಮಿಣಾ ಜಯಪಾಲ್‌ ಅವರು ತಮ್ಮ ಧರ್ಮವನ್ನು ನಮೂದಿಸಿಲ್ಲ. ಅತ್ಯಂತ ಹಿರಿಯ ಸಂಸದರಾದ ಡಾ. ಅಮಿ ಬೆರಾ ಅವರು ತಮ್ಮನ್ನು ಯುನಿಟೇರಿಯನ್ ಎಂದು ನಮೂದಿಸಿಕೊಂಡಿದ್ದಾರೆ. ಈ ಇಬ್ಬರನ್ನೂ ಸೇರಿ ಅಮೆರಿಕ ಸಂಸತ್ ಪ್ರವೇಶಿಸಿದ ಭಾರತ ಮೂಲದವರ ಸಂಖ್ಯೆ 6ಕ್ಕೆ ಏರಿದೆ.

ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಳವಾಗಿದ್ದರೂ, ಅಮೆರಿಕದ ಸಂಸತ್‌ನಲ್ಲಿ ಕ್ರೈಸ್ತರ ಸಂಖ್ಯೆಯೇ ದೊಡ್ಡ ಮಟ್ಟದಲ್ಲಿದೆ. 2ನೇ ಸ್ಥಾನದಲ್ಲಿರುವ ಯಹೂದಿಗಳ ಸಂಖ್ಯೆ  31 ಇದ್ದು ಇದು ಒಟ್ಟು ಸಂಸದರ ಸಂಖ್ಯೆಯ ಶೇ 6ರಷ್ಟು ಮಾತ್ರ. 

ನಂತರದ ಸ್ಥಾನಗಳಲ್ಲಿ ಹಿಂದೂಗಳು ಹಾಗೂ ಮುಸ್ಲೀಮರು ಇದ್ದಾರೆ. ಇವರ ಸಂಖ್ಯೆ ತಲಾ 4 ಇದೆ. 

ಸಂಸದರಲ್ಲಿ ಶೇ 98ರಷ್ಟು ಕ್ರೈಸ್ತರು ರಿಪಬ್ಲಿಕನ್ ಪಕ್ಷಕ್ಕೆ ಸೇರಿದ್ದಾರೆ. ಡೆಮಾಕ್ರಟ್ಸ್‌ಗಳ ಸಂಖ್ಯೆ ಶೇ 75. ಆದರೆ ಮೂವರು ರಿಪಬ್ಲಿಕನ್ ಸಂಸದರು ತಮ್ಮ ಧರ್ಮವನ್ನು ಘೋಷಿಸಿಕೊಂಡಿಲ್ಲ. ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದ 21 ಸಂಸದರು ತಮ್ಮ ಧಾರ್ಮಿಕ ನಂಬಿಕೆಯನ್ನು ಬಹಿರಂಗಗೊಳಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.