ADVERTISEMENT

ಉಕ್ರೇನ್‌ನ ಅಣುಸ್ಥಾವರ ಸಮೀಪ ರಷ್ಯಾ ರಾಕೆಟ್‌ ದಾಳಿ: 13 ಸಾವು

ಏಜೆನ್ಸೀಸ್
Published 10 ಆಗಸ್ಟ್ 2022, 11:41 IST
Last Updated 10 ಆಗಸ್ಟ್ 2022, 11:41 IST
ರಷ್ಯಾ ರಾಕೆಟ್‌ ದಾಳಿಯಲ್ಲಿ ಹಾನಿಗೊಳಗಾಗಿರುವ ಉಕ್ರೇನ್‌ನ ವೈದ್ಯಕೀಯ ಪ್ರಯೋಗಾಲಯ –ಎಎಫ್‌ಪಿ ಚಿತ್ರ
ರಷ್ಯಾ ರಾಕೆಟ್‌ ದಾಳಿಯಲ್ಲಿ ಹಾನಿಗೊಳಗಾಗಿರುವ ಉಕ್ರೇನ್‌ನ ವೈದ್ಯಕೀಯ ಪ್ರಯೋಗಾಲಯ –ಎಎಫ್‌ಪಿ ಚಿತ್ರ   

ಕೀವ್‌: ರಷ್ಯಾ ಆಕ್ರಮಿತ ಅಣುಸ್ಥಾವರ ಪ್ರದೇಶಗಳ ಸಮೀಪ ರಷ್ಯಾ ನಡೆಸಿದ ರಾಕೆಟ್‌ ದಾಳಿಯಲ್ಲಿ 13 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ ಬುಧವಾರ ಆರೋಪಿಸಿದೆ.

ರಾತ್ರೋರಾತ್ರಿ ಕೇಂದ್ರ ಉಕ್ರೇನ್‌ನ ಡಿನಿಪ್ರೊಪೆಟ್ರೊವ್‌ಸ್ಕ್‌ ಪ್ರದೇಶದಲ್ಲಿ ನಡೆದ ರಾಕೆಟ್‌ ದಾಳಿಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಇಲ್ಲಿನ ಗವರ್ನರ್‌ ರೆಝ್ನಿಚೆನ್ಕೊ, ‘ಅದು ಕರಾಳ ರಾತ್ರಿ. ರಷ್ಯಾ ರಾಕೆಟ್‌ ದಾಳಿಗೆ ಬಲಿಯಾಗಬೇಡಿ. ವಾಯುದಾಳಿಯ ಸೈರನ್‌ ಮೊಳಗಿದ ತಕ್ಷಣ ಶೆಲ್ಟರ್‌ಗಳಲ್ಲಿ ಅಡಗಿಕೊಳ್ಳಿ’ ಎಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.