ಮೆಕ್ಸಿಕೊ: ಕೇಮನ್ ದ್ವೀಪ ಪ್ರದೇಶದ ನೈರುತ್ಯ ದಿಕ್ಕಿಗೆ, ಕೆರೀಬಿಯನ್ ಸಮುದ್ರದಲ್ಲಿ ಶನಿವಾರ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 7.6ರಷ್ಟಿತ್ತು.
ಸ್ಥಳೀಯ ಕಾಲಮಾನ ಬೆಳಿಗ್ಗೆ 6.23 ಗಂಟೆಗೆ, ಸಮುದ್ರದಲ್ಲಿ 10 ಕಿ.ಮೀ. ಆಳ ಪ್ರದೇಶದಲ್ಲಿ ಭೂಕಂಪವಾಗಿದೆ. ಇದರ ಕೇಂದ್ರ ಬಿಂದು ಕೇಮನ್ ದ್ವೀಪ ಪ್ರದೇಶದ ಜಾರ್ಜ್ ಪಟ್ಟಣದಿಂದ 200 ಕಿ.ಮೀ. ದೂರದಲ್ಲಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸುನಾಮಿ ಸಾಧ್ಯತೆ ಇಲ್ಲ. ಆದರೆ, ಈ ಸಂಬಂಧ ಮುನ್ನೆಚ್ಚರಿಕೆ ನೀಡಲಾಗಿದೆ’ ಎಂದು ಅಮರಿಕ ರಾಷ್ಟ್ರೀಯ ಸುನಾಮಿ ಮುನ್ನೆಚ್ಚರಿಕೆ ಕೇಂದ್ರವು ತಿಳಿಸಿದೆ. ಪೋರ್ಟೊ ರಿಕೊ ಮತ್ತು ವರ್ಜಿನ್ ದ್ವೀಪ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಿದ್ದು, ಬಳಿಕ ಹಿಂಪಡೆಯಲಾಯಿತು.
ಕರಾವಳಿ ಭಾಗದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. 0.3ರಿಂದ 1 ಮೀಟರ್‌ವರೆಗೂ ಅಲೆಗಳು ಕಾಣಿಸಿಕೊಳ್ಳಬಹುದು ಎಂದು ಕೇಮನ್ ದ್ವೀಪದ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.