ರನ್‌ವೇನಲ್ಲಿ ಪಲ್ಟಿಯಾದ ವಿಮಾನ
ಚಿತ್ರ ಕೃಪೆ: ಎಕ್ಸ್
ಟೊರೆಂಟೊ: ಕೆನಡಾದ ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಇಳಿಯುತ್ತಿದ್ದ ವಿಮಾನವೊಂದು ಪಲ್ಟಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ವಿಮಾನದಲ್ಲಿದ್ದ 76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. 18 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಿನಿಯಾಪೊಲಿಸ್ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನವು ಮಧ್ಯಾಹ್ನ 2.15ಕ್ಕೆ ಪಿಯರ್ಸನ್ ನಿಲ್ದಾಣದಲ್ಲಿ ಇಳಿಯಲು ಯತ್ನಿಸಿದಾಗ ಘಟನೆ ನಡೆದಿದೆ. ರನ್ ವೇ ಹಿಮದಿಂದ ಆವೃತವಾಗಿದ್ದ ಮತ್ತು ಬಲವಾಗಿ ಗಾಳಿ ಬೀಸಿದ ಪರಿಣಾಮ ವಿಮಾನ ಪಲ್ಟಿಯಾಗಿದೆ.
ವಿಮಾನವು ತಲೆಕೆಳಗಾಗಿ ರನ್ ವೇನಲ್ಲಿ ಜಾರಿದ ಮತ್ತು ಪ್ರಯಾಣಿಕರನ್ನು ರಕ್ಷಿಸುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.