ADVERTISEMENT

ಜಲಜನಕ ಬಳಕೆಯ ವಿಮಾನ: ಏರ್‌ಬಸ್‌, ಈಸಿಜೆಟ್‌, ರೋಲ್ಸ್‌–ರಾಯ್ಸ್‌ ಜಂಟಿ ಕಾರ್ಯಾಚರಣೆ

ರಾಯಿಟರ್ಸ್‌
Published 5 ಸೆಪ್ಟೆಂಬರ್ 2023, 11:57 IST
Last Updated 5 ಸೆಪ್ಟೆಂಬರ್ 2023, 11:57 IST
<div class="paragraphs"><p>ಏರ್‌ಬಸ್‌ ಎ320</p></div>

ಏರ್‌ಬಸ್‌ ಎ320

   

ರಾಯಿಟರ್ಸ್ ಚಿತ್ರ

ಲಂಡನ್: ಜಲಜನಕವನ್ನು ಇಂಧನವಾಗಿ ಬಳಕೆ ಮಾಡುವ ವಿಮಾನ ಅಭಿವೃದ್ಧಿಯಲ್ಲಿ ಏರ್‌ಬಸ್‌, ಈಸಿಜೆಟ್‌ ಹಾಗೂ ರೋಲ್ಸ್‌–ರಾಯ್ಸ್‌ ಕಂಪನಿಗಳು ಜತೆಯಾಗಿವೆ.

ADVERTISEMENT

ಇಂಗಾಲದ ಪ್ರಮಾಣವನ್ನು ವಾತಾವರಣಕ್ಕೆ ಕಡಿಮೆ ಹೊರಸೂಸುವಂತೆ ಮಾಡುವ ನಿಟ್ಟಿನಲ್ಲಿ ‘ವಿಮಾನಯಾನದಲ್ಲಿ ಜಲಜನಕ’ (ಎಚ್‌ಐಎ) ಎಂಬ ಯೋಜನೆಯಲ್ಲಿ ಈ ಮೂರೂ ಕಂಪನಿಗಳು ಪಾಲ್ಗೊಂಡಿವೆ. ಮೂಲಸೌಕರ್ಯ, ನೀತಿ, ಸುರಕ್ಷತೆ ಕುರಿತ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಜಲಜನಕ ಬಳಸಿ ಆಗಸಕ್ಕೆ ನೆಗೆಯುವ ವಿಮಾನದಲ್ಲಿ ಈ ಎಲ್ಲವನ್ನೂ ಅಳವಡಿಸಲಾಗುವುದು ಎಂದು ಪರಸ್ಪರ ಒಡಂಬಡಿಕೆಯಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ.

‘ನಿಜವಾಗಿ ವಿಮಾನವು ಹಾರಲು ಸಿದ್ಧವಾಗಿದ್ದರೆ ಮತ್ತು ನಾವು ಅವುಗಳನ್ನು ನಿರ್ವಹಿಸಬಹುದಾದರೆ ಅದು ಈ ಹಂತದಲ್ಲಿ ತಪ್ಪಾಗಲಿದೆ. ಏಕೆಂದರೆ ವಾಸ್ತವದಲ್ಲಿ ಕೆಲವು ನೀತಿಗಳು ಸದ್ಯಕ್ಕೆ ಪೂರಕವಾಗಿಲ್ಲದ ಕಾರಣ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಈಸಿಜೆಟ್‌ನ ಸಿಇಒ ಜಾನ್‌ ಲಂಡ್‌ಗ್ರೇನ್‌ ಹೇಳಿದರು.

‘ಜಲಜನಕವನ್ನು ಇಂಧನವನ್ನಾಗಿ ಬಳಸುವ ವಿಮಾನವನ್ನು ಏರ್‌ಬಸ್ ಕಂಪನಿಯು 2035ರ ಹೊತ್ತಿಗೆ ಹೊರತರುವ ಯೋಜನೆ ಹೊಂದಿದೆ. ಅದನ್ನು ಖರೀದಿಸುವ ಮೊದಲ ಕಂಪನಿ ಈಸಿಜೆಟ್‌ ಆಗಿರಲಿದೆ’ ಎಂದು ಅವರು ಹೇಳಿದರು.

‘2050ರ ಹೊತ್ತಿಗೆ ಶೂನ್ಯ ಇಂಗಾಲ ಹೊರಸೂಸುವ ಯೋಜನೆಯ ಭಾಗವಾಗಿ ಜಲಜನಕ ಬಳಕೆಯ ವಿಮಾನಗಳ ಅಭಿವೃದ್ಧಿ ಹೊಸ ತಂತ್ರಜ್ಞಾನವಾಗಿದೆ. ನವೀಕರಿಸಬಹುದಾದ ಇಂಧನವನ್ನು ಬಳಕೆಗೆ ಸಿದ್ಧರೂಪದಲ್ಲಿ ನೀಡುವುದೇ ಸವಾಲಿನ ಕೆಲಸವಾಗಿದೆ. ಅದರಲ್ಲೂ ವಿಮಾನಗಳದ್ದು ದೊಡ್ಡ ಗಾತ್ರದ ಇಂಧನ ಟ್ಯಾಂಕ್ ಹೊಂದಿರುತ್ತದೆ. ಅವುಗಳಿಗಾಗಿಯೇ ಬೇರೆ ಮಾದರಿಯ ವಿಮಾನ ನಿಲ್ದಾಣಗಳನ್ನು ನಿರ್ಮಿಸಬೇಕಾಗಬಹುದು’ ಎಂದು ಲಂಡ್‌ಗ್ರೇನ್‌ ಹೇಳಿದರು.

‘ಎಚ್‌ಐಎ ಪಾಲುದಾರ ವ್ಯವಸ್ಥೆಯಲ್ಲಿ ಬ್ರಿಟನ್‌ನ ಜಿಕೆಎನ್‌ ಏರೋಸ್ಪೇಸ್‌ ಹಾಗೂ ಡೆನ್ಮಾರ್ಕ್‌ ಮೂಲದ ಗ್ರೀನ್ ಎನರ್ಜಿ ಕಂಪನಿಯು ಆರ್ಸ್ಟೆಡ್‌, ಜತೆಗೂಡಿವೆ. ಜಲಜನಕ ಬಳಸಿ ಹಾರಾಟ ನಡೆಸುವ ವಿಮಾನದ ಅಭಿವೃದ್ಧಿಯಲ್ಲಿ ಸುರಕ್ಷತಾ ಮಾರ್ಗಸೂಚಿ ಅಳವಡಿಸಲು ಬಹಳಷ್ಟು ಕೆಲಸಗಳಿವೆ’ ಎಂದಿದ್ದಾರೆ.

ಮುಂದಿನ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯಾಗಲಿರುವ ಈ ನೂತನ ಇಂಧನ ಬಳಕೆಯ ವಿಮಾನ ತಯಾರಿಗೆ 2023ರ ಅಂತ್ಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.