ADVERTISEMENT

ರಷ್ಯಾ ರಾಸಾಯನಿಕ ಅಸ್ತ್ರ ಬಳಸಿದರೆ ಎಲ್ಲಾ ಆಯ್ಕೆಗಳು ನಮ್ಮ ಮುಂದಿವೆ: ಇಂಗ್ಲೆಂಡ್

ರಾಯಿಟರ್ಸ್
Published 12 ಏಪ್ರಿಲ್ 2022, 10:54 IST
Last Updated 12 ಏಪ್ರಿಲ್ 2022, 10:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್: ರಷ್ಯಾದಿಂದ ಉಕ್ರೇನ್‌ನಲ್ಲಿ ಯಾವುದೇ ರಾಸಾಯನಿಕ ಅಸ್ತ್ರಗಳ ಬಳಕೆಯಾದರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಎಲ್ಲಾ ಆಯ್ಕೆಗಳು ನಮ್ಮ ಮುಂದಿರುತ್ತವೆ ಎಂದು ಬ್ರಿಟಿಷ್ ರಕ್ಷಣಾ ಸಚಿವ ಜೇಮ್ಸ್ ಹೆಪ್ಪಿ ಮಂಗಳವಾರ ತಿಳಿಸಿದ್ದಾರೆ.

ಸುಮಾರು ಏಳು ವಾರಗಳ ಆಕ್ರಮಣದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ ಎಂದು ನಂಬಲಾದ ಮರಿಯುಪೋಲ್‌ನಲ್ಲಿ ರಷ್ಯಾದ ಪಡೆಗಳು ರಾಸಾಯನಿಕ ಅಸ್ತ್ರಗಳನ್ನು ಬಳಸಿರಬಹುದು ಎಂಬ ವರದಿಗಳ ವಿವರಗಳನ್ನು ಪರಿಶೀಲಿಸಲು ಬ್ರಿಟನ್ ತನ್ನ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ ಎಂದು ಬ್ರಿಟಿಷ್ ವಿದೇಶಾಂಗ ಸಚಿವ ಲಿಜ್ ಟ್ರಸ್ ಸೋಮವಾರ ಹೇಳಿದ್ದರು.

ಮಸುಕಾದ ಕೆಲವು ವಿಷಯಗಳಿವೆ ಮತ್ತು ರಾಸಾಯನಿಕ ಅಸ್ತ್ರಗಳ ಬಳಕೆಯಾದರೆ ಕೂಡಲೇ ಅದಕ್ಕೆ ಪ್ರತಿಕ್ರಿಯೆ ಸಿಗುತ್ತದೆ ಮತ್ತು ಆ ಪ್ರತಿಕ್ರಿಯೆ ಏನಾಗಿರಬಹುದು ಎಂಬುದಕ್ಕೆ ಎಲ್ಲಾ ಆಯ್ಕೆಗಳು ಈಗ ನಮ್ಮ ಮುಂದಿವೆ. ಬ್ರಿಟಿಷ್ ರಕ್ಷಣಾ ಗುಪ್ತಚರ ಸಂಸ್ಥೆಯು ಇಲ್ಲಿಯವರೆಗೆ ಈ ವರದಿಗಳನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಹೆಪ್ಪಿ ಸ್ಕೈ ನ್ಯೂಸ್‌ಗೆ ತಿಳಿಸಿದ್ದಾರೆ.

ADVERTISEMENT

ರಷ್ಯಾ ರಾಸಾಯನಿಕ ಅಸ್ತ್ರಗಳನ್ನು ಆಶ್ರಯಿಸಬಹುದು ಮತ್ತು ಮಾಸ್ಕೋದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ಇನ್ನಷ್ಟು ಬಲಿಷ್ಠವಾದ ನಿರ್ಬಂಧಗಳನ್ನು ವಿಧಿಸಬೇಕು. ಇದು ಅಂತಹ ಅಸ್ತ್ರಗಳ ಬಳಕೆಯ ಬಗ್ಗೆ ಮಾತನಾಡುವುದನ್ನು ಸಹ ತಡೆಯುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಸೋಮವಾರ ತಿಳಿಸಿದ್ದರು.

ಒಂದು ವೇಳೆ ರಾಸಾಯನಿಕ ಅಸ್ತ್ರಗಳು ಬಳಕೆಯಾದರೆ, ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಪರಿಗಣಿಸಲು ನಮ್ಮ ಪ್ರಧಾನಿ ಮತ್ತು ಪ್ರಪಂಚದ ಇತರ ದೇಶಗಳ ಸರ್ಕಾರದ ಮುಖ್ಯಸ್ಥರಿಗೆ ಅದು ಬಹಳ ಮುಖ್ಯವಾದ ಕ್ಷಣವಾಗಿರುತ್ತದೆ ಎಂದು ಹೆಪ್ಪಿ ಬಿಬಿಸಿ ಟಿವಿಗೆ ತಿಳಿಸಿದರು.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಾಸಾಯನಿಕ ಅಸ್ತ್ರಗಳ ಬಳಕೆಯು ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟಪಡಿಸಬೇಕು ಮತ್ತು ಅವುಗಳನ್ನು ಬಳಸಿದರೆ ಪಾಶ್ಚಿಮಾತ್ಯ ರಾಷ್ಟ್ರಗಳು ಅದರೊಂದಿಗೆ ನಿಲ್ಲುತ್ತವೆ ಎಂಬುದನ್ನು ಕೂಡ ಅವರು ನಿರೀಕ್ಷಿಸಬಾರದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.