ADVERTISEMENT

ಉಕ್ರೇನ್ ಗಡಿಯಿಂದ ರಷ್ಯಾ ಪಡೆಗಳು ತೆರಳಿಲ್ಲ: ಅಮೆರಿಕ ಹೇಳಿಕೆ

ರಾಯಿಟರ್ಸ್
Published 17 ಫೆಬ್ರುವರಿ 2022, 2:32 IST
Last Updated 17 ಫೆಬ್ರುವರಿ 2022, 2:32 IST
ರಷ್ಯಾ ಪಡೆಗಳು ಉಕ್ರೇನ್‌ನಿಂದ ಹೊರಹೋಗಿಲ್ಲ ಎಂದು ಅಮೆರಿಕ ಹೇಳಿದೆ.
ರಷ್ಯಾ ಪಡೆಗಳು ಉಕ್ರೇನ್‌ನಿಂದ ಹೊರಹೋಗಿಲ್ಲ ಎಂದು ಅಮೆರಿಕ ಹೇಳಿದೆ.   

ವಾಷಿಂಗ್ಟನ್: ರಷ್ಯಾ ಪಡೆಗಳು ಉಕ್ರೇನ್‌ನಿಂದ ಹೊರಹೋಗುತ್ತಿವೆ ಎನ್ನುವುದು ಸುಳ್ಳು ಎಂದು ಅಮೆರಿಕ ಹೇಳಿದೆ.

ಉಕ್ರೇನ್‌ನಿಂದ ಭದ್ರತಾ ಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿದ್ದೇವೆ ಎನ್ನುವ ರಷ್ಯಾದ ಹೇಳಿಕೆಗೆ ಪ್ರತಿಯಾಗಿ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಈ ವಿಚಾರ ಬಹಿರಂಗಪಡಿಸಿದ್ದಾರೆ.

ಉಕ್ರೇನ್ ಗಡಿಯಿಂದ ರಷ್ಯಾ ತನ್ನ ಎಲ್ಲ ಪಡೆಗಳನ್ನು ವಾಪಸ್ ಕರೆಯಿಸಿಕೊಳ್ಳುತ್ತಿದೆ ಎಂದು ಹೇಳಿತ್ತು. ಅದರಿಂದ ಉಕ್ರೇನ್‌ನಲ್ಲಿ ಸೃಷ್ಟಿಯಾಗಿದ್ದ ಸಂಘರ್ಷ ಕಡಿಮೆಯಾಗಿದೆ ಎಂದು ಭಾವಿಸಲಾಗಿತ್ತು. ಆದರೆ ನಾವು ಅಂದುಕೊಂಡಂತೆ ರಷ್ಯಾದ ಪಡೆಗಳು ವಾಪಸ್ ತೆರಳಿಲ್ಲ. ಉಕ್ರೇನ್‌ನಿಂದ ಹೊರಹೋಗಿದ್ದೇವೆ ಎನ್ನುವುದು ಸುಳ್ಳು ಎಂದು ಅಮೆರಿಕದ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳು ಬೀಡುಬಿಟ್ಟಿದ್ದರಿಂದ ಯುದ್ಧದ ಸನ್ನಿವೇಶ ಸೃಷ್ಟಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.