ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಜೋ ಬೈಡನ್ ಹಿಂದೆ ಸರಿಯಲಿದ್ದಾರೆ ಎಂದು ಬಹುತೇಕ ಖಚಿತ ದಿನಾಂಕದ ಸಮೇತ ಭವಿಷ್ಯ ನುಡಿದಿದ್ದ ಮಹಿಳಾ ಜ್ಯೋತಿಷಿ ಆ್ಯಮಿ ಟ್ರಿಪ್ ಅವರು ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಿದ್ದಾರೆ ಎಂದು ಅಮೆರಿಕ ಮಾಧ್ಯಮಗಳನ್ನು ಉಲ್ಲೇಖಿಸಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಇಂಟರ್‌ನೆಟ್‌ನ ಖ್ಯಾತ ಜ್ಯೋತಿಷಿ ಎಂದು ತನ್ನನ್ನು ತಾನು ಕರೆದುಕೊಳ್ಳುವ ಅವರು, ಟ್ರಂಪ್ ಅವರ ಅದೃಷ್ಟ ಚೆನ್ನಾಗಿದ್ದು, ಅವರೇ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಮತ್ತೆ ಅಧಿಕಾರಕ್ಕೇರಲು ಬೇಕಾದ ಕ್ರೇಜಿ ವಿಷಯಗಳನ್ನು ಟ್ರಂಪ್ ಹೊಂದಿದ್ದಾರೆ ಎಂದೂ ಅವರು ಹೇಳಿದ್ದಾರೆ.
‘ಅವರ ಹಾದಿಯಲ್ಲಿ ಏರುಪೇರುಗಳಿದ್ದು.. ಅವರ ವೃತ್ತಿ ಜೀವನ ಮತ್ತು ಗುರಿ ಅನಿರೀಕ್ಷಿತತೆಯಿಂದ ಕೂಡಿದೆ’ ಎಂದೂ ಅವರು ಹೇಳಿದ್ದಾರೆ.
ಈ ಹಿಂದೆ ಜೋ ಬೈಡನ್ ಅಮೆರಿಕದ ಅಧ್ಯಕ್ಷೀಯ ಚುನಾವಣೆ ರೇಸ್‌ನಿಂದ ಹಿಂದೆ ಸರಿಯಲಿದ್ದಾರೆ ಎಂದೂ ಟ್ರಿಪ್ ಎಕ್ಸ್ ಪೋಸ್ಟ್‌ನಲ್ಲಿ ಭವಿಷ್ಯ ನುಡಿದಿದ್ದರು.
ಖಚಿತ ದಿನಾಂಕ ತಿಳಿಸಿ ಎಂದು ಬೆಂಬಲಿಗರು ಕೇಳಿದಾಗ ಜುಲೈ 21 ಎಂದಿದ್ದರು.
ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಲಿದ್ದಾರೆ ಎಂದು 2020ರ ಆಗಸ್ಟ್ 11ರಂದು ಟ್ರಿಪ್ ಹೇಳಿದ್ದರು.
81 ವರ್ಷ ಜೋ ಬೈಡನ್, ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಜುಲೈ 20ರಂದು ಘೋಷಿಸಿದ್ದರು. ಅಲ್ಲದೆ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ತಮ್ಮ ಬೆಂಬಲ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.