ಕೊಲಂಬೊ:ಏಳು ರಾಷ್ಟ್ರಗಳಲ್ಲಿ ಮುಂದಿನ ವಾರದಿಂದ ‘ಹಿಂದೂ ಮಹಾಸಾಗರ ಸಮರಾಭ್ಯಾಸ’ವನ್ನು ನಡೆಸಲಿರುವ ಆಸ್ಟ್ರೇಲಿಯಾ, ಕೊಲಂಬೊದಿಂದ ಇದನ್ನು ಆರಂಭಿಸಲಿದೆ.
ಮಾರ್ಚ್ 26ರಂದು ಭಾರತದೊಂದಿಗೆ ಆಸ್ಟ್ರೇಲಿಯಾ ಅಭ್ಯಾಸ ನಡೆಸಲಿದೆ ಎಂದು ಕ್ಯಾನ್‌ಬೆರಾದ ರಾಯಭಾರ ಕಚೇರಿ ಶುಕ್ರವಾರ ಹೇಳಿದೆ.
ಶ್ರೀಲಂಕಾದ ಬಂದರು ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿಯಡಿ ಚೀನಾ ಸಾಕಷ್ಟು ಹೂಡಿಕೆ ಮಾಡಿದ್ದು, ಚೀನಾವು ಈ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದೆ.
ಏಷ್ಯಾ, ಯುರೋಪ್ ಮತ್ತು ಆಫ್ರಿಕಾ ಖಂಡಗಳ ನಡುವಿನ ಸಂಬಂಧ ಸುಧಾರಣೆಯಲ್ಲಿ ಈ ಸಮಾರಾಭ್ಯಾಸ ಮಹತ್ವದ ಪಾತ್ರ ವಹಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.