ADVERTISEMENT

ಆಸ್ಟ್ರೇಲಿಯಾ: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 15:55 IST
Last Updated 9 ಡಿಸೆಂಬರ್ 2025, 15:55 IST
   

ಮೆಲ್ಬರ್ನ್‌: ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸುವ ಕಾನೂನು ಬುಧವಾರದಿಂದ ಜಾರಿಗೆ ಬರಲಿದೆ. 

ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆಗೆ ಸಂಬಂಧಿಸಿದಂತೆ ಸಮಗ್ರವಾದ ಕಾನೂನು ರೂಪಿಸಿರುವ ಮೊದಲ ದೇಶ ಆಸ್ಟ್ರೇಲಿಯಾ. ಈ ಕಾನೂನಿನ ಮೂಲಕ ಸಾಮಾಜಿಕ ಜಾಲತಾಣ ವೇದಿಕೆಗಳು ಬಳಕೆದಾರರ ವಯಸ್ಸನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ. 

‘ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸಲು ಸಾಮಾಜಿಕ ಹೊಣೆಗಾರಿಕೆಯನ್ನು ನಿಗದಿಪಡಿಸುವ ಉದ್ದೇಶ ಈ ಕಾನೂನಿಗೆ ಇದೆ’ ಎಂದು ಅಲ್ಲಿನ ಸರ್ಕಾರ ಹೇಳಿದೆ.

ADVERTISEMENT

ಆದರೆ, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಕಿಕ್‌, ಸ್ನಾಪ್‌ಚಾಟ್‌, ಟಿಕ್‌ಟಾಕ್‌, ಯೂಟ್ಯೂಬ್‌, ಥ್ರೆಡ್ಸ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸದೆ ತಮ್ಮ ಸ್ನೇಹಿತರ ಜತೆಗೆ ಸಂಪರ್ಕದಲ್ಲಿರುವುದು ಹೇಗೆ ಎಂಬ ಚಿಂತೆ ಮಕ್ಕಳನ್ನು ಕಾಡುತ್ತಿದೆ. 

‘ಈ ನಿಷೇಧವು ನಮ್ಮ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಿಲ್ಲ. ನಾವು ಸ್ನೇಹಿತರು ಪರಸ್ಪರ ಸಂಪರ್ಕದಲ್ಲಿರಲು ಪರ್ಯಾಯ ಆಯ್ಕೆಗಳು ಸಾಕಷ್ಟಿಲ್ಲ’ ಎಂದು ಮೆಲ್ಬರ್ನ್‌ನ  15 ವರ್ಷದ ಬಾಲಕ ರಿಲೆ ಅಲೆನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.