
ಖಮೇನಿ ಹತ್ಯೆ ಅಮೆರಿಕ, ಇಸ್ರೇಲ್ ವಿರುದ್ಧ ಬೀದರ್‌ನಲ್ಲಿ ಪ್ರತಿಭಟನೆ
ಜೆರುಸಲೇಂ: ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ.
‘ನಿಖರ ಹಾಗೂ ಬೃಹತ್ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ನಾಯಕನನ್ನು ಹೊಡೆದುರುಳಿಸ ಲಾಗಿದೆ. ಈ ಮೂಲಕ ಇರಾನ್‌ನಲ್ಲಿ ದಶಕಗಳ ಅಧ್ಯಾಯವೊಂದಕ್ಕೆ ತೆರೆ ಎಳೆಯಲಾಗಿದೆ’ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಭಾನುವಾರ ಹೇಳಿದೆ.
ತನ್ನ ನಾಯಕ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಗುಡುಗಿದೆ
ದಿನದ ಬೆಳವಣಿಗೆಗಳು
ಒಮಾನ್ ಕೊಲ್ಲಿಯಲ್ಲಿ ಇರಾನ್‌ನ ಯುದ್ಧ ನೌಕೆಯ ಮೇಲೆ ದಾಳಿ ನಡೆಸಿದ್ದು, ಮುಳುಗಡೆಯಾಗಿದೆ– ಅಮೆರಿಕ ಸೇನೆ
ಒಂದೇ ದಾಳಿಗೆ ಖಮೇನಿ ಜೊತೆಗಿದ್ದ ಇರಾನ್‌ನ 48 ನಾಯಕರು ಸಾವು: ಡೊನಾಲ್ಡ್ ಟ್ರಂಪ್
ಇರಾನ್ ನಡೆಸಿದ ದಾಳಿಗೆ ಅಮೆರಿಕದ ಮೂವರು ಸೈನಿಕರು ಸಾವು– ಐವರಿಗೆ ಗಂಭೀರ ಗಾಯ
ಅಮೆರಿಕದ ವಿಮಾನವಾಹಕ ನೌಕೆ ಅಬ್ರಹಾಂ ಲಿಂಕನ್ ಗುರಿಯಾಗಿರಿಸಿ 4 ಕ್ಷಿಪಣಿಗಳಿಂದ ದಾಳಿ–ಇರಾನ್
ಇರಾನ್‌ನಲ್ಲಿ ಮೃತಪಟ್ಟವರ ಸಂಖ್ಯೆ 200ಕ್ಕೆ ಏರಿಕೆ
ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಒಂದೇ ದಿನ 10 ಮಂದಿ ಸಾವು
ಪಾಕಿಸ್ತಾನದ ಕರಾಚಿಯಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಮೇಲೆ ದಾಳಿ
ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್, ಬಹರೇನ್, ಇರಾಕ್ ಕೂಡ ಗುರಿ
ನೆರೆ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ ಇರಾನ್
ಎರಡನೇ ದಿನವೂ ವಾಯುಪ್ರದೇಶವನ್ನು ಮುಚ್ಚಿದ ಇರಾನ್, ಇಸ್ರೇಲ್ ಹಾಗೂ ಇರಾಕ್
ಜಾಗತಿಕ ಮಟ್ಟದಲ್ಲಿ ವಿಮಾನಯಾನ ಸಂಚಾರ ವ್ಯತ್ಯಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.