ADVERTISEMENT

ವಿಮಾನ ದುರಂತ: ಅಜರ್‌ಬೈಜಾನ್‌ನಲ್ಲಿ ಶೋಕಾಚರಣೆ

ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೌರವನಮನ

ಏಜೆನ್ಸೀಸ್
Published 26 ಡಿಸೆಂಬರ್ 2024, 15:26 IST
Last Updated 26 ಡಿಸೆಂಬರ್ 2024, 15:26 IST
ವಿಮಾನ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರಿಗೆ ಗೌರವ ನೀಡಿ ಅಜರ್‌ಬೈಜಾನ್‌ನ ರಾಯಭಾರ ಕಚೇರಿ ಮೇಲಿನ ರಾಷ್ಟ್ರಧ್ವಜವನ್ನು ಅರ್ಧದವರೆಗೆ ಕೆಳಗಿಳಿಸಲಾಗಿತ್ತು –ಎಎಫ್‌ಪಿ ಚಿತ್ರ
ವಿಮಾನ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರಿಗೆ ಗೌರವ ನೀಡಿ ಅಜರ್‌ಬೈಜಾನ್‌ನ ರಾಯಭಾರ ಕಚೇರಿ ಮೇಲಿನ ರಾಷ್ಟ್ರಧ್ವಜವನ್ನು ಅರ್ಧದವರೆಗೆ ಕೆಳಗಿಳಿಸಲಾಗಿತ್ತು –ಎಎಫ್‌ಪಿ ಚಿತ್ರ   

ಬಾಕು: ವಿಮಾನ ಪತನಗೊಂಡು 38 ಜನರು ಮೃತಪಟ್ಟಿರುವ ಕಾರಣ ಅಜರ್‌ಬೈಜಾನ್‌ನಲ್ಲಿ ಗುರುವಾರ ದೇಶದಾದ್ಯಂತ ಶೋಕಾಚರಣೆ ಮಾಡಲಾಯಿತು.

ರಾಷ್ಟ್ರಧ್ವಜವನ್ನು ಅರ್ಧದವರೆಗೆ ಕೆಳಗಿಳಿಸಿ, ಶೋಕಾಚರಣೆ ಮಾಡಲಾಯಿತು. ರಸ್ತೆಗಳಲ್ಲಿ ಕೆಲ ಹೊತ್ತು ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.‌

ಅಜರ್‌ಬೈಜಾನ್‌ ಏರ್‌ಲೈನ್ಸ್‌ ವಿಮಾನಯಾನ ಕಂಪನಿಗೆ ಸೇರಿದ ವಿಮಾನವು ಕಜಕಸ್ತಾನದ ಅಕ್ತೌ ನಗರದಲ್ಲಿ ಬುಧವಾರ ಅಪಘಾತಕ್ಕೀಡಾಗಿತ್ತು. ದುರಂತದಲ್ಲಿ 29 ಮಂದಿ ಗಾಯಗೊಂಡಿದ್ದು, ವಿಮಾನ ಪತನಕ್ಕೆ ಕಾರಣ ಏನೆಂದು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.