ಢಾಕಾ: ‘ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಅಲ್ಪಸಂಖ್ಯಾತರ ಮೇಲಿನ ಕಿರುಕುಳ ತಪ್ಪಿಸಲು ವಿಫಲವಾಗಿದೆ’ ಎಂದು ಆರೋಪಿಸಿ ಇಲ್ಲಿನ ಅಲ್ಪಸಂಖ್ಯಾತ ಸಂಘಟನೆಗಳು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದವು.
ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿ ದೀಪು ಚಂದ್ರದಾಸ್ ಅವರ ಬರ್ಬರ ಹತ್ಯೆಯಾದ ಕಾರಣಕ್ಕೆ ಹಿಂದೂ ಹಾಗೂ ಇತರೆ ಅಲ್ಪಸಂಖ್ಯಾತರ ಸಂಘಟನೆಗಳ ಮುಖಂಡರು ಢಾಕಾದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.
‘ಅವರು (ಮುಹಮ್ಮದ್ ಯೂನಸ್) ಮಾನವೀಯ ಬಾಂಗ್ಲಾದೇಶ ನಿರ್ಮಾಣ ಮಾಡುವುದಾಗಿ ಹೇಳಿಕೊಳ್ಳುತ್ತಾರೆ. ವಾಸ್ತವದಲ್ಲಿ ಅಮಾನವೀಯ ಮುಖ್ಯ ಸಲಹೆಹಗಾರರಾಗಿದ್ದಾರೆ’ ಎಂದು ಅಲ್ಪಸಂಖ್ಯಾತ ಏಕತಾ ರಂಗದ ಜಂಟಿ ಸಂಯೋಜಕ ಮಹೀಂದ್ರ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಿಬ್ಬರ ಬಂಧನ: ದಾಸ್ ಹತ್ಯೆಗೆ ಸಂಬಂಧಿಸಿದಂತೆ ಅಪರಾಧ ವಿರೋಧಿ ಕ್ಷಿಪ್ರ ಕಾರ್ಯಪಡೆಯು 10 ಮಂದಿ ಶಂಕಿತರನ್ನು ಬಂಧಿಸಿದ್ದು, ಸೋಮವಾರ ಮತ್ತಿಬ್ಬರನ್ನು ಬಂಧಿಸಿದೆ.
ಗನ್‌ಮ್ಯಾನ್ ಭದ್ರತೆ: ಸಿಕ್ದರ್ ಮೇಲೆ ಗುಂಡಿನ ದಾಳಿ ಬೆನ್ನಲ್ಲೇ, ಹೆಚ್ಚಿನ ಅಪಾಯ ಎದುರಿಸುತ್ತಿರುವ 20 ಮಂದಿಗೆ ಗನ್‌ಮ್ಯಾನ್ ಭದ್ರತೆ ಒದಗಿಸಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಇಲಾಖೆಯ ಸಲಹೆಗಾರ ಜಹಾಂಗೀರ್ ಆಲಮ್ ಚೌಧರಿ ತಿಳಿಸಿದ್ದಾರೆ.
20 ಮಂದಿಯಲ್ಲಿ ಎನ್‌ಸಿಪಿ ಪಕ್ಷದ ಆರು ಮುಖಂಡರು, ಮೀಸಲಾತಿ ವಿರೋಧಿ ಚಳವಳಿಯ ಮುಂಚೂಣಿ ಹೋರಾಟಗಾರರು ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.