ADVERTISEMENT

ಬಾಂಗ್ಲಾ–ಪಾಕ್‌ ನೇರ ವಿಮಾನ ಸೇವೆ: ಜ.29ಕ್ಕೆ ಪುನರಾರಂಭ

ಪಿಟಿಐ
Published 7 ಜನವರಿ 2026, 14:48 IST
Last Updated 7 ಜನವರಿ 2026, 14:48 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಢಾಕಾ: ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ನಡುವೆ ನೇರ ವಿಮಾನಯಾನ ಸೇವೆಯು ಜನವರಿ 29ರಿಂದ ಪುನರಾರಂಭಗೊಳ್ಳಲಿದೆ. ಸರ್ಕಾರಿ ಸ್ವಾಮ್ಯದ ಬಿಮನ್‌ ಬಾಂಗ್ಲಾದೇಶ ಸಂಸ್ಥೆಯು ಢಾಕಾದಿಂದ ಕರಾಚಿಗೆ ನೇರ ಹಾಗೂ ತಡೆರಹಿತ ವಿಮಾನಯಾನ ಸೇವೆ ಆರಂಭಿಸಲಿದೆ. 

ಉಭಯ ರಾಷ್ಟ್ರಗಳ ನಡುವಿನ ನೇರ ವಿಮಾನಯಾನ ಸೇವೆ ಸ್ಥಗಿತಗೊಂಡು ಒಂದು ದಶಕಕ್ಕೂ ಅಧಿಕ ಸಮಯದ ಬಳಿಕ ಇದೀಗ ಮತ್ತೆ ಈ ಕಾರ್ಯಾಚರಣೆ ಪ‍್ರಾರಂಭವಾಗುತ್ತಿದೆ. ಮೊದಲ ಹಂತದ ಭಾಗವಾಗಿ ಗುರುವಾರ ಮತ್ತು ಶನಿವಾರ ವಿಮಾನಗಳ ಕಾರ್ಯಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ. 

ADVERTISEMENT

ಢಾಕಾದಿಂದ ರಾತ್ರಿ 8 ಗಂಟೆಗೆ ಹೊರಡಲಿರುವ ವಿಮಾನ ರಾತ್ರಿ 11ಕ್ಕೆ ಕರಾಚಿಗೆ ತಲುಪಲಿದೆ. ಹಿಂದಿರುಗುವ ವಿಮಾನವು ಕರಾಚಿಯಿಂದ ರಾತ್ರಿ 12ಕ್ಕೆ ಹೊರಡಲಿದ್ದು, ಬೆಳಿಗ್ಗೆ 4.20ಕ್ಕೆ ಢಾಕಾ ತಲುಪಲಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. 

ಢಾಕಾ ಮತ್ತು ಕರಾಚಿ ನಡುವಿನ ಸಮೀಪದ ಮಾರ್ಗವೆಂದರೆ ಅದು ಭಾರತದ ವಾಯುಪ್ರದೇಶದ ಮೂಲಕ ಸಾಗುವುದೇ ಆಗಿದೆ. ಇದಕ್ಕೆ ಸಂಬಂಧಿಸಿದ ಅಗತ್ಯ ಅನುಮತಿಯನ್ನು ಭಾರತದಿಂದ ಬಾಂಗ್ಲಾದೇಶ ಪಡೆದಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. 

ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಸರ್ಕಾರ ಪತನಗೊಂಡ ಬಳಿಕ ಪಾಕ್‌–ಬಾಂಗ್ಲಾ ನಡುವಿನ ಸಂಬಂಧ ವೃದ್ಧಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಅದರ ಭಾಗವಾಗಿಯೇ ಈ ಬೆಳವಣಿಗೆ ನಡೆದಿದೆ. ಉಭಯ ರಾಷ್ಟ್ರಗಳ ನಡುವಿನ ನೇರ ವಿಮಾನ ಸಂಚಾರ ಇದ್ದದ್ದು 2012ರಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.