ADVERTISEMENT

ಅಸ್ಸಾಂಗೆ ನೀರು ಪೂರೈಕೆ ನಿಂತಿಲ್ಲ: ಭೂತಾನ್‌

ಪಿಟಿಐ
Published 26 ಜೂನ್ 2020, 12:12 IST
Last Updated 26 ಜೂನ್ 2020, 12:12 IST
ಕೃಷಿ ಚಟುವಟಿಕೆಗಳಿಗಾಗಿ ನೀರು ಹರಿಸುತ್ತಿರುವುದು–ಪ್ರಾತಿನಿಧಿಕ ಚಿತ್ರ
ಕೃಷಿ ಚಟುವಟಿಕೆಗಳಿಗಾಗಿ ನೀರು ಹರಿಸುತ್ತಿರುವುದು–ಪ್ರಾತಿನಿಧಿಕ ಚಿತ್ರ   

ಥಿಂಪು: ಅಸ್ಸಾಂನಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಪೂರೈಸುತ್ತಿರುವ ನೀರಿನ ಸರಬರಾಜನ್ನು ನಿಲ್ಲಿಸಲಾಗಿದೆ ಎಂಬ ಆರೋಪವನ್ನು ಭೂತಾನ್‌ ತಳ್ಳಿ ಹಾಕಿದೆ.

‘ಅಸ್ಸಾಂನ ಬಕ್ಸಾ ಮತ್ತು ಉದಲ್ಗಿರಿ ಜಿಲ್ಲೆಗಳ ರೈತರಿಗೆ ನೀರು ಪೂರೈಸುವುದನ್ನು ಭೂತಾನ್ ತಡೆಹಿಡಿದಿದೆ ಎಂದು ಭಾರತದ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಈ ಆರೋಪಗಳು ಆಧಾರ ರಹಿತವಾಗಿವೆ. ಇದುಭಾರತ ಮತ್ತು ಭೂತಾನ್‌ ನಡುವೆ ಗೊಂದಲ ಸೃಷ್ಟಿಸುವ ಯತ್ನವಾಗಿದೆ.ಯಾವುದೇ ಕಾರಣವಿಲ್ಲದೇ ಭೂತಾನ್ ಯಾಕೆ‌ ನೀರಿನ ಸರಬರಾಜನ್ನು ನಿಲ್ಲಿಸುತ್ತದೆ’ ಎಂದು ಭೂತಾನ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಶ್ನಿಸಿದೆ.

‘ನೀರು ಸರಬರಾಜು ಮಾಡುತ್ತಿರುವ ಮಾರ್ಗದಲ್ಲಿ ನೈಸರ್ಗಿಕ ಮಲೀನಗಳು ಸೇರಿರುವುದರಿಂದ ನೀರು ಸರಬರಾಜಿನಲ್ಲಿ ತೊಡಕು ಉಂಟಾಗಿದೆ. ಮಾಧ್ಯಮಗಳು ಇದನ್ನು ತಪ್ಪಾಗಿ ವರದಿ ಮಾಡಿವೆ’ ಎಂದು ಅಸ್ಸಾಂನ ಮುಖ್ಯ ಕಾರ್ಯದರ್ಶಿ ಕುಮಾರ್‌ ಸಂಜಯ್‌ ಕೃಷ್ಣ ಅವರು ಟ್ಟೀಟ್‌ ಮಾಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.