ADVERTISEMENT

ಅಮೆರಿಕ: ಪ್ರಾಥಮಿಕ ಸುತ್ತಿನಲ್ಲಿ ಬೈಡನ್‌, ಟ್ರಂಪ್‌ಗೆ ಗೆಲುವು

ಪಿಟಿಐ
Published 3 ಏಪ್ರಿಲ್ 2024, 16:14 IST
Last Updated 3 ಏಪ್ರಿಲ್ 2024, 16:14 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಗಳ ಆಯ್ಕೆಗಾಗಿ ನಡೆಯುವ ಪ್ರಾಥಮಿಕ ಸುತ್ತಿನ ಚುನಾವಣೆಗಳಲ್ಲಿ, ಅಧ್ಯಕ್ಷ ಜೋ ಬೈಡನ್‌ ಹಾಗೂ ಪ್ರತಿಸ್ಪರ್ಧಿ, ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಗೆಲುವು ಸಾಧಿಸಿದ್ದಾರೆ.

ಪಕ್ಷದ ವತಿಯಿಂದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯ ಆಯ್ಕೆಗಾಗಿ, ರೋಡ್‌ ಐಲ್ಯಾಂಡ್‌, ಕನೆಕ್ಟಿಕಟ್, ನ್ಯೂಯಾರ್ಕ್‌ ಹಾಗೂ ವಿನ್‌ಕನ್ಸಿನ್‌ ರಾಜ್ಯಗಳಲ್ಲಿ ಮಂಗಳವಾರ ನಡೆದ ಚುನಾವಣೆಗಳಲ್ಲಿ, ಆಯಾ ಪಕ್ಷಗಳ ನೂರಾರು ಪ್ರತಿನಿಧಿಗಳು ಹಕ್ಕು ಚಲಾಯಿಸಿದರು.

ಅಭ್ಯರ್ಥಿ ಸ್ಥಾನಕ್ಕೆ ಆಯ್ಕೆ ಬಯಸಿ ಹಲವರು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ, ಡೆಮಾಕ್ರಟಿಕ್‌ ಪಕ್ಷದ ಬೈಡನ್‌ ಅವರು ಶೇ 80ಕ್ಕೂ ಅಧಿಕ ಮತ ಪಡೆದರೆ, ಟ್ರಂಪ್‌ ಅವರು ಶೇ 75ಕ್ಕಿಂತ ಹೆಚ್ಚು ಮತಗಳನ್ನು ಪಡೆದು, ಗೆಲುವಿನ ನಗೆ ಬೀರಿದರು.

ADVERTISEMENT

ನವೆಂಬರ್ 5ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.